‘ಸ್ಮಾಲ್ ಸ್ಕ್ರೀನ್’ಗೆ ಮಾತಿನ ಮಲ್ಲ ರೀ ಎಂಟ್ರಿ

346

ನಟ ಸೃಜನ ಲೋಕೇಶ ಬಿಗ್ ಸ್ಕ್ರೀನ್ ಗಿಂತ ಸ್ಮಾಲ್ ಸ್ಕ್ರಿನ್ ನಲ್ಲಿಯೇ ಹೆಚ್ಚು ಸೌಂಡ್ ಮಾಡೋದು. ಜನರಿಗೆ ಇವರು ಹತ್ತಿರವಾಗಿದ್ದು ಸಹ ಟಿವಿ ಮೂಲಕವೇ. ಸೃಜನ ಹೋಂ ಬ್ಯಾನರ್ ನಲ್ಲಿ ನಡೆಸಿಕೊಂಡು ಬರ್ತಿದ್ದ ಮಜಾ ಟಾಕೀಸ್ ಶೋ ಕಂಪ್ಲೀಟ್ ಆದ್ಮೇಲೆ ಒಂದಿಷ್ಟು ಸಿನ್ಮಾದ ಕಡೆ ವಾಲಿದ್ರು.

ಮಾತಿನ ಮಲ್ಲ ಬಿಗ್ ಸ್ಕ್ರೀನ್ ಮೇಲೆಯೇ ಉಳಿದುಕೊಳ್ತಾರೇನೋ ಅನ್ನೋ ಪ್ರಶ್ನೆ ಕಾಡ್ತಿರುವ ಹೊತ್ತಿನಲ್ಲಿಯೇ ಟಿವಿ ಪರದೆಗೆ ಮರಳಿ ಬರ್ತಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ಈ ಹಿಂದೆ ನಡೆಸಿಕೊಡ್ತಿದ್ದ ಚೋಟಾ ಚಾಂಪಿಯನ್ ಅನ್ನೋ ಶೋವನ್ನ ಮತ್ತೆ ಶುರು ಮಾಡ್ತಿದ್ದಾರಂತೆ.

ಈ ಹಿಂದೆ ಕೆಲಸ ಮಾಡಿದ್ದ ಟಿವಿಯೊಂದಿಗೆ ನಟ ಸೃಜನ ರೀ ಎಂಟ್ರಿಯಾಗ್ತಿದ್ದಾರೆ. ಇದೀಗ ಚೋಟಾ ಚಾಂಪಿಯನ್ ಆಡಿಷನ್ ನಡೆಲಿದೆ ಎಂದು ವಾಹಿನಿಯವರೇ ಪ್ರಕಟಿಸಿದ್ದಾರೆ. ಸೋ ಸೃಜನ ಲೋಕೇಶ ಅಭಿಮಾನಿಗಳಿಗೆ ಮತ್ತೆ ಖುಷಿಯಾಗಿದೆ.




Leave a Reply

Your email address will not be published. Required fields are marked *

error: Content is protected !!