ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿಮಾನಿಗಳಿಗೆ ನಾಳೆ ಸ್ಪೆಷಲ್ ಡೇ ಆಗಿರಲಿದೆ. ಯಾಕಂದ್ರೆ, ಅವರ ಬಹುನಿರೀಕ್ಷಿತ ರಾಬರ್ಟ್ ಚಿತ್ರದ ಸಾಂಗ್ ವೊಂದು ರಿಲೀಸ್ ಆಗ್ತಿದೆ. ಈ ಬಗ್ಗೆ ಸ್ವತಃ ನಿರ್ದೇಶಕ ತರುಣ ಸುಧೀರ ಹೇಳಿದ್ದಾರೆ. ಟ್ವೀಟರ್ ನಲ್ಲಿ ಸಾಂಗ್ ಬಗ್ಗೆ ಬರೆದುಕೊಂಡಿದ್ದಾರೆ.
ಬಾ ಬಾ ಬಾ ನಾನ್ ರೆಡಿ ಅನ್ನೋ ಸಾಲುಗಳ ಹಾಡು ನಾಳೆ ರಿಲೀಸ್ ಆಗಲಿದೆ. ಮಾರ್ಚ್ 3, ಸಂಜೆ 5 ಗಂಟೆಗೆ ಡಿ ಬಾಸ್ ಅಭಿಮಾನಿಗಳಿಗೆ ಸಾಂಗ್ ಗಿಫ್ಟ್ ನೀಡಲಾಗ್ತಿದೆ. ಈಗಾಗ್ಲೇ ಫ್ಯಾನ್ಸ್ ಸಹ ನಾವು ರೆಡಿ ಹಬ್ಬ ಮಾಡೋದಕ್ಕೆ. ರೆಕಾರ್ಡ್ ಮಾಡುವುದಕ್ಕೆ ಎಂದು ರೀ ಟ್ವಿಟ್ ಮಾಡುವ ಮೂಲಕ ಸಂಭ್ರಮ ಪಡ್ತಿದ್ದಾರೆ.
ಈಗಾಗ್ಲೇ ಟೀಸರ್ ಅಲೆಯಲ್ಲಿ ಮುಳುಗಿ ಹೋಗಿರುವ ಫ್ಯಾನ್ಸ್ ಗೆ ಅರ್ಜುನ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿರುವ ಹಾಡು ಮತ್ತಷ್ಟು ಕಿಕ್ ನೀಡಲಿದೆ. ಹೀಗಾಗಿ ನಟ ದರ್ಶನ ಫ್ಯಾನ್ಸ್ ಈ ಹಾಡಿಗಾಗಿ ಎದುರು ನೋಡ್ತಿದ್ದಾರೆ.