ನಿರ್ಭಯಾ ಹತ್ಯಾಚಾರಿ ಅರ್ಜಿ ವಜಾ

385

ನವದೆಹಲಿ: ನಿರ್ಭಯಾ ಹತ್ಯಾಚಾರಿಗಳು ಕಾನೂನನ್ನ ತಮ್ಗೆ ಹೇಗೆ ಬೇಕೋ ಹಾಗೆ ಆಟವಾಡಿಸಿಕೊಂಡಿದ್ದು, ಇದರ ಫಲವಾಗಿ ಮೂರು ಮೂರು ಸಾರಿ ಗಲ್ಲು ಶಿಕ್ಷೆಯ ದಿನಾಂಕ ಮುಂದೂಡಲಾಯ್ತು. ಇದೀಗ ಅಪರಾಧಿ ಪವನ ಗುಪ್ತಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನ ವಜಾಗೊಳಿಸಲಾಗಿದೆ.

ಈ ಹಿಂದೆ ನ್ಯಾಯಾಧೀಶರು ನೀಡಿದ್ದ ಗಲ್ಲುಶಿಕ್ಷೆಯಲ್ಲಿ ಕೆಲವೊಂದಿಷ್ಟು ಲೋಪಗಳಿದ್ದು, ತಮ್ಗೆ ಗಲ್ಲು ಶಿಕ್ಷೆಯಿಂದ ಜೀವಾವಧಿ ಶಿಕ್ಷೆಗೆ ತೀರ್ಪುನ್ನು ಬದಲಾಯಿಸಬೇಕೆಂದು ನಾಲ್ವರು ಅಪರಾಧಿಗಳಲ್ಲೊಬ್ಬನಾದ ಪವನ ಗುಪ್ತಾ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇದನ್ನು ವಜಾಗೊಳಿಸಿದೆ. ಒಬ್ಬೊಬ್ಬ ಅಪರಾಧಿಗಳು ಒಂದೊಂದು ಅರ್ಜಿಯನ್ನ ಸಲ್ಲಿಸುವ ಮೂಲಕ ನೇಣು ಕುಣಿಕೆಯಿಂದ ತಪ್ಪಿಸಿಕೊಳ್ಳಲು ನೋಡ್ತಿದ್ದಾರೆ.

ಸುಮಾರು 8 ವರ್ಷಗಳ ಹಿಂದೆ ನಡೆದ ಘನಘೋರ ಹತ್ಯಾಚಾರದ ಕ್ರೂರಿಗಳಿಗೆ ಇಂದಿಗೂ ಶಿಕ್ಷೆ ನೀಡಲು ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂದು ಅರ್ಜಿ ವಜಾಗೊಂಡಿದೆ. ದೆಹಲಿ ಹೈಕೋರ್ಟ್ ನೀಡಿರುವ ತೀರ್ಪಿನಂತೆ ನಾಳೆಯಾದ್ರೂ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!