ಕನ್ನಡದಲ್ಲಿಯೂ ಬರಲಿದೆ ‘ಮಾಸ್ಟರ್’

310

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ತಮಿಳು ಸಿನಿ ದುನಿಯಾದ ದಳಪತಿ ವಿಜಯ ಹಾಗೂ ವಿಜಯ ಸೇತುಪತಿ ನಟನೆಯ ಮಾಸ್ಟರ್ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇಬ್ಬರು ಸ್ಟಾರ್ ನಟರ ಚಿತ್ರ ಹೇಗಿರುತ್ತೆ ಅನ್ನೋ ಕುತೂಹಲ ಮೂಡಿದೆ. ಈಗಾಗ್ಲೇ ಪೋಸ್ಟರ್, ಟೀಸರ್ ರಿಲೀಸ್ ಮಾಡಲಾಗಿದ್ದು ಭಾರೀ ಸದ್ದು ಮಾಡ್ತಿದೆ.

ವಿಜಯ ಚಿತ್ರಗಳು ಅಂದ್ರೆ ಅಲ್ಲಿ ಖಂಡಿತ ಹೊಸತನ ಇರುತ್ತೆ. ಮಾಸ್ಟರ್ ಮೂವಿಯಲ್ಲಿ ಅದು ನೋಡಬಹುದು ಅನಿಸುತ್ತೆ. ಇನ್ನು ಈ ಚಿತ್ರ ಕನ್ನಡದಲ್ಲಿಯೂ ಬರುತ್ತಿರುವುದು ಮತ್ತೊಂದು ವಿಶೇಷ. ಯೆಸ್, ಮಾಸ್ಟರ್ ಸಿನಿಮಾವನ್ನ ಕನ್ನಡಕ್ಕೂ ಡಬ್ ಮಾಡಿ ರಿಲೀಸ್ ಮಾಡಲಾಗುತ್ತೆ ಅನ್ನೋ ಸುದ್ದಿ ಹೊರ ಬಿದ್ದಿದೆ.

ಈ ದೀಪಾವಳಿಗೆ ಸಿನಿಮಾ ರಿಲೀಸ್ ಎನ್ನಲಾಗಿತ್ತು. ಬಟ್ ಅದಾಗಿಲ್ಲ. ಈಗ ಸಂಕ್ರಾಂತಿಗೆ ಫಿಕ್ಸ್ ಆಗಿದ್ದಾರೆ. ತಮಿಳು ಹಾಗೂ ಕನ್ನಡದ ವರ್ಷನ್ ಎರಡು ಒಟ್ಟಿಗೆ ರಿಲೀಸ್ ಮಾಡಲಾಗ್ತಿದೆ. ಒಂದು ಬೇಸರದ ವಿಚಾರ ಅಂದ್ರೆ, ಮಾಸ್ಟರ್ ಥಿಯೇಟರ್ ಗೆ ಲಗ್ಗೆ ಇಡುತ್ತಿಲ್ಲ. ನೆಟ್ ಫ್ಲಿಕ್ಸ್ ನಲ್ಲಿ ರಿಲೀಸ್ ಆಗ್ತಿದೆ. ಹೀಗಾಗಿ ಥಿಯೇಟರ್ ನಲ್ಲಿ ನೋಡಬೇಕು ಎನ್ನುವವರಿಗೆ ಒಂದಿಷ್ಟು ನಿರಾಸೆಯಾಗಿದೆ.




Leave a Reply

Your email address will not be published. Required fields are marked *

error: Content is protected !!