ಮ್ಯಾಕ್ಸ್‘ವೆಲ್’ ಬ್ಯಾಟಿಂಗ್.. ರಾಹುಲ ಟ್ರೋಲ್

328

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಶುಕ್ರವಾರ ಸಿಡ್ನಿಯಲ್ಲಿ ನಡೆದ ಇಂಡಿಯಾ-ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ಭಾರತ ಸೋಲು ಅನುಭವಿಸಿತು. ಕ್ಯಾಪ್ಟನ್ ಪಿಂಚ್, ಸ್ಮಿತ್ ಶತಕ ಬಾರಿಸಿದ್ರು. ಇನ್ನು ಮ್ಯಾಕ್ಸ್ ವೆಲ್ 19 ಬೌಲ್ ಗಳಲ್ಲಿ ಭರ್ಜರಿಯಾಗಿ 45 ರನ್ ಗಳಿಸಿದ. ಈ ವಿಚಾರವಾಗಿ ಕೆ.ಎಲ್ ರಾಹುಲರನ್ನ ಟ್ರೋಲ್ ಮಾಡಲಾಗ್ತಿದೆ.

ಅರೇ, ಮ್ಯಾಕ್ಸ್ ವೆಲ್ ಆಡುವುದಕ್ಕೂ ಕೆ.ಎಲ್ ರಾಹುಲರನ್ನ ಟ್ರೋಲ್ ಮಾಡುವುದಕ್ಕೂ ಏನ್ ಸಂಬಂಧವೆಂದು ಕೇಳಬಹುದು. ಅದಕ್ಕೆ ಉತ್ತರ ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಟೂರ್ನಿ. ರಾಹುಲ ನಾಯಕತ್ವದ ಪಂಜಾಬ್ ತಂಡದಲ್ಲಿ ಆಡಿದ ಮ್ಯಾಕ್ಸ್ ವೆಲ್ 13 ಮ್ಯಾಚ್ ಗಳಲ್ಲಿ ಗಳಿಸಿದ್ದು ಕೇವಲ 108 ರನ್ ಮಾತ್ರ. 10 ಕೋಟಿಗೆ ಹರಾಜಾಗಿದ್ದ ಮ್ಯಾಕ್ಸ್ ವೆಲ್ ಇಡೀ ಟೂರ್ನಿಯಲ್ಲಿ ಕೈ ಕೊಟ್ಟಿದ್ದ.

ಶುಕ್ರವಾರ ನಡೆದ ಪಂದ್ಯದಲ್ಲಿ ದೇಶದ ಪರವಾಗಿ ಅಬ್ಬರಿಸಿದ ಮ್ಯಾಕ್ಸ್ ವೆಲ್ 3 ಸಿಕ್ಸ್, 5 ಬೌಂಡರಿ ಸಮೇತ 19 ಬೌಲ್ ಗಳಲ್ಲಿ 45 ರನ್ ಗಳಿಸಿದ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಕೆ.ಎಲ್ ರಾಹುಲರನ್ನ ಟ್ರೋಲ್ ಮಾಡಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!