ಇಂದಿನ ‘ಸ್ಟ್ರಾಬೆರಿ ಚಂದ್ರಗ್ರಹಣ’ ವಿಶೇಷತೆ ಏನು? ಈ ಹೆಸರು ಬಂದಿದ್ದೇಗೆ?

441

ಪ್ರಜಾಸ್ತ್ರ ವಿಶೇಷ ವರದಿ

ಇಂದು ರಾತ್ರಿ 11.15ಕ್ಕೆ ಸ್ಟ್ರಾಬೆರಿ ಚಂದ್ರಗಹಣ ಗೋಚರಿಸಲಿದೆ. ಇದು ಜೂನ್ 6ರ 12.54ಕ್ಕೆ ಪೂರ್ಣವಾಗಿ ಕಾಣಿಸಿಕೊಳ್ಳಲಿದೆ. ಅಲ್ದೇ, ಬೆಳಗ್ಗಿನಜಾವ 2.34ಕ್ಕೆ ಕೊನೆಯಾಗಲಿದ್ದು, 3 ಗಂಟೆ 18 ನಿಮಿಷಗಳ ಕಾಲ ಗೋಚರಿಸುತ್ತೆ.

ಚಂದ್ರಗ್ರಹಣ ಎಂದರೆ?

ಚಂದ್ರನ ಮೇಲ್ಮೈಯಲ್ಲಿ ಸೂರ್ಯನ ಬೆಳಕು ಬೀಳುವುದನ್ನ ಭೂಮಿ ತಡೆಯುವುದಕ್ಕೆ ಚಂದ್ರಗ್ರಹಣ ಎನ್ನಲಾಗ್ತಿದೆ. ಈ ಟೈಂನಲ್ಲಿ ಭೂಮಿ, ಚಂದ್ರ ಹಾಗೂ ಸೂರ್ಯನ ನಡುವೆ ಚಲಿಸುತ್ತೆ. ಇದ್ರಿಂದಾಗಿ ಚಂದ್ರನಿಂದ ಪ್ರತಿಫಲನಗೊಳ್ಳುವ ಸೂರ್ಯನ ಬೆಳಕನ್ನ ತಡೆಯುತ್ತದೆ.

ಏನಿದು ಸ್ಟ್ರಾಬೆರಿ ಚಂದ್ರಗ್ರಹಣ:

ಜೂನ್ ತಿಂಗಳಲ್ಲಿ ಕಾಣಿಸಿಕೊಳ್ಳುವ ಪೂರ್ಣಪ್ರಮಾಣದ ಚಂದ್ರಗ್ರಹಣಕ್ಕೆ ಸ್ಟ್ರಾಬೆರಿ ಚಂದ್ರಗ್ರಹಣ ಎನ್ನಲಾಗುತ್ತೆ. ಅಮೆರಿಕಾದಲ್ಲಿ ಜೂನ್ ತಿಂಗಳಲ್ಲಿ ಸ್ಟ್ರಾಬೆರಿ ಹಣ್ಣು ಮಾಗುವ ಸಮಯ. ಅಲ್ದೇ, ಭಾರತದಲ್ಲಿ ಈ ವೇಳೆ ಹುಣ್ಣಿಮೆ ಇರುವುದ್ರಿಂದ ಭಾರತೀಯರಿಗಾಗಿ ಸ್ಟ್ರಾಬೆರಿ ಚಂದ್ರಗ್ರಹನ್ ಎಂದು ಹೆಸರು ಸೂಚಿಸಲಾಗಿದೆ. ಇನ್ನು ಗ್ರಹಣದ ವೇಳೆ ಚಂದ್ರನು ಭೂಮಿ ನೆರಳಿನಲ್ಲಿ ಸುತ್ತುವುದರಿಂದ ಛಾಯಾ ಚಂದ್ರಗ್ರಹಣ ಎಂದು ಸಹ ಕರೆಯಲಾಗುತ್ತೆ.

ಎಲ್ಲೆಲ್ಲಿ ಕಾಣಿಸುತ್ತೆ?

ಯುರೋಪ್, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕ, ಫೆಸಿಪಿಕ್, ಏಷ್ಯಾ, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಅಂಟಾರ್ಟಿಕ್ ಸೇರಿದಂತೆ ಭಾರತದಲ್ಲಿಯೂ ಇದು ಗೋಚರಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಮತ್ತೆ ಕಾಣಿಸಿಕೊಳ್ಳುವುದು ಯಾವಾಗ?

ಈ ವರ್ಷದ ಆರಂಭದಲ್ಲಿ ಜನವರಿ 10ರಂದು ಚಂದ್ರಗ್ರಹಣ ಕಾಣಿಸಿಕೊಂಡಿತ್ತು. ಜುಲೈ 5 ಹಾಗೂ ನೆವೆಂಬರ್ 30ರಂದು ಮತ್ತೆ ಚಂದ್ರಗ್ರಹಣ ಕಾಣಿಸಿಕೊಳ್ಳಲಿದೆ. ಇನ್ನು ಜೂನ್ 21ರಂದು ಸೂರ್ಯ ಗ್ರಹಣ ಕಾಣಿಸಿಕೊಳ್ಳಲಿದೆ.




Leave a Reply

Your email address will not be published. Required fields are marked *

error: Content is protected !!