ಹತ್ಯಾಚಾರಿಗಳಿಗೆ ಗಲ್ಲು: ಅಳಿಸಲಾಗದ ಕಪ್ಪು ಚುಕ್ಕೆಯೆಂದ ಮಾನವ ಹಕ್ಕುಗಳ ಸಂಸ್ಥೆ

338

ನವದೆಹಲಿ: ನಿರ್ಭಯಾ ಹತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿರುವುದನ್ನ ಭಾರತೀಯ ಮಾನವ ಹಕ್ಕುಗಳ ಸಂಸ್ಥೆ ವಿರೋಧಿಸಿದೆ. ಭಾರತದ ಮಾನವ ಹಕ್ಕುಗಳ ಮೇಲೆ ಎಂದೂ ಅಳಿಲಾಗದ ಕಪ್ಪುಚುಕ್ಕೆ ಎಂದು ಅಮ್ನಸ್ಟಿ ಇಂಡಿಯಾ ಸಂಸ್ಥೆ ಹೇಳಿದೆ.

ಮಹಿಳೆಯರ ವಿರುದ್ಧದ ದೌರ್ಜನಕ್ಕೆ ಮರದಂಡನೆ ಒಂದೇ ಪರಿಹಾರವಲ್ಲ. 2015 ಆಗಸ್ಟ್ ತಿಂಗಳಿನಿಂದ ಇಲ್ಲಿಯವರೆಗೂ ಗಲ್ಲು ಆಗಿರ್ಲಿಲ್ಲ. ಆದ್ರೆ, ಇಂದು ಏಕಕಾಲದಲ್ಲಿ ನಾಲ್ವರನ್ನ ಗಲ್ಲಿಗೇರಿಸಲಾಗಿದೆ. ಇದು ಭಾರತದ ಮಾನವ ಹಕ್ಕುಗಳ ಹೋರಾಟದ ಮೇಲಿನ ಕಪ್ಪುಚುಕ್ಕೆ ಎಂದು ಅಮ್ನಸ್ಟಿ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಅವಿನಾಶಕುಮಾರ ಹೇಳಿದ್ದಾರೆ.

ಲಿಂಗ ಆಧಾರಿತ ದೌರ್ಜನ್ಯ ತಡೆಗೆ ಸಂರಕ್ಷಣಾ ವಿಧಾನಗಳ ರೀತಿಯ ಪರಿಣಾಮಕಾರಿ, ದೀರ್ಘಕಾಲಿನ ಪರಿಹಾರ ಜಾರಿಗೊಳಿಸಬೇಕು. ತನಿಖಾ ಸಂಸ್ಥೆಯ ವ್ಯವಸ್ಥೆ ಸುಧಾರಿಸುವುದು, ಕಾನೂನು ಬಲಪಡಿಸುವುದು ಹಾಗೂ ಸಂತ್ರಸ್ತ ಕುಟುಂಬಗಳಿಗೆ ಬೆಂಬಲ ನೀಡುವುದು ಅಗತ್ಯವಾಗಿದೆ ಎಂದು ಟ್ವೀಟ್ ಮೂಲಕ ಹೇಳಲಾಗಿದೆ.




Leave a Reply

Your email address will not be published. Required fields are marked *

error: Content is protected !!