ನಿರ್ಭಯಾ ಕೇಸ್: ನಂಬಿಕೆ ಕಳೆದು ಹೋಗ್ತಿದೆಯೆಂದು ಕಣ್ಣೀರಿಟ್ಟ ತಾಯಿ

326

ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಗೆ ಸಂಬಂಧಿಸಿದಂತೆ ಅಪರಾಧಿಗಳಿಗೆ ನೀಡಿರುವ ಗಲ್ಲು ಶಿಕ್ಷೆಯ ಟೈಂನಲ್ಲಿಯೂ ವಿಳಂಬ ನೀತಿ ಅನುಸರಿಸ್ತಿರುವುದಕ್ಕೆ ಆಕೆಯ ತಾಯಿ, ನಂಬಿಕೆ ಕಳೆದು ಹೋಗ್ತಿದೆ ಅಂತಾ ಕಣ್ಣೀರು ಹಾಕಿದ್ದಾರೆ.

ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ಮಾತ್ನಾಡಿದ ಆಶಾದೇವಿ, ನಾನು ನಂಬಿಕೆ ಹಾಗೂ ಭರವಸೆಗಳನ್ನ ಕಳೆದುಕೊಳ್ಳುತ್ತಿದ್ದೇನೆ. ಅಪರಾಧಿಗಳು ಕಾಲಹರಣ ಮಾಡ್ತಿರುವುದು ಯಾಕೆ ಅರ್ಥವಾಗ್ತಿಲ್ಲ. ಅಪರಾಧಿ ಪವನಗೆ ಹೊಸ ವಕೀಲರನ್ನ ನೇಮಕ ಮಾಡಿದ್ರೆ, ಕೇಸ್ ಅರ್ಥ ಮಾಡಿಕೊಳ್ಳಲು ಅವರು ಸಾಕಷ್ಟು ಸಮಯ ತೆಗೆದುಕೊಳ್ತಾರೆ ಅಂತಾ ಅಸಾಹಕತೆಯನ್ನ ಹೊರ ಹಾಕಿದ್ದಾರೆ.

ಈ ಪ್ರಕರಣದ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ಹೊಸ ಡೆತ್ ವಾರೆಂಟ್ ಹೊರಡಿಸಿಯೆಂದು ಆಕೆಯ ಪೋಷಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಹಾಜರಾಗಿದ್ರು. ಈ ವೇಳೆ ಕಣ್ಣೀರಿಟ್ಟ ಆಶಾದೇವಿ, ನಾನು ಕೈ ಮುಗಿದು ನಿಂತಿದ್ದೇನೆ. ನಾನು ಸಹ ಓರ್ವ ಮನುಷ್ಯಳು. ಅಪರಾಧಿಗಳು ವಿಳಂಬ ತಂತ್ರ ಅನುಸರಿಸ್ತಿರುವುದು ಕೋರ್ಟ್ ಗೆ ಯಾಕೆ ಅರ್ಥವಾಗ್ತಿಲ್ಲವೆಂದು ಆಕ್ರೋಶ ಹೊರ ಹಾಕಿದ್ರು. ಈ ಸಂಬಂಧ ಕೋರ್ಟ್ ವಿಚಾರಣೆಯನ್ನ ನಾಳೆಗೆ ಮುಂದೂಡಿದೆ.




Leave a Reply

Your email address will not be published. Required fields are marked *

error: Content is protected !!