ಪೊಗರು ರಿಲೀಸ್ ಬಗ್ಗೆ ಆ್ಯಕ್ಷನ್ ಪ್ರಿನ್ಸ್ ಹೇಳಿದ್ದೇನು?

390

ಸ್ಯಾಂಡಲ್ ವುಡ್ ಅಂಗಳದಲ್ಲಿ ಬಹುಬೇಗ ಫ್ಯಾನ್ಸ್ ಫಾಲೋ ಗಳಿಸಿದ ನಟ ಅಂದ್ರೆ ಧ್ರುವ ಸರ್ಜಾ. ಮಾಡಿರುವ ಮೂರು ಸಿನಿಮಾ ಸೂಪರ್ ಹಿಟ್. ಇದೀಗ ನಾಲ್ಕನೇ ಸಿನಿಮಾ ಪೊಗರು ಸಾಕಷ್ಟು ಕ್ರೇಜ್ ಹುಟ್ಟು ಹಾಕಿದೆ. ನಟ ಧ್ರುವ ಸರ್ಜಾ ಫ್ಯಾನ್ಸ್ ಈ ಚಿತ್ರಕ್ಕಾಗಿ ತುದಿಗಾಲ ಮೇಲೆ ನಿಂತಿದ್ದಾರೆ.

ಒಲ್ಡ್ ಮಾಂಕ್ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ, ತಮ್ಮ ಪೊಗರು ಚಿತ್ರದ ಬಗ್ಗೆ ಮಾತ್ನಾಡಿದ್ದಾರೆ. ಮಾರ್ಚ್ ನಲ್ಲಿ ಆಡಿಯೋ ಹಾಗೂ ಎರಡನೇ ಟ್ರೇಲರ್ ರಿಲೀಸ್ ಮಾಡಲಿದ್ದಾರಂತೆ. ಫಸ್ಟ್ ಟೈಂ ಡೈಲಾಗ್ ಟ್ರೇಲರ್ ಅನ್ನೋ ಹೊಸ ಟ್ರೆಂಡ್ ಹುಟ್ಟು ಹಾಕಿದ ಪೊಗರು ಟೀಂ, ಭಾರೀ ನಿರೀಕ್ಷೆ ಮೂಡಿಸಿದೆ. ಹೀಗಾಗಿ ಚಿತ್ರ ಯಾವಾಗ ಬರುತ್ತೆ ಅಂತಾ ಎಲ್ಲರೂ ಕಾಯ್ತಿದ್ದು, ಏಪ್ರಿಲ್ ನಲ್ಲಿ ಸಿನಿಮಾ ರಿಲೀಸ್ ಆಗುತ್ತೆ ಅಂತಾ ಧ್ರುವ ಹೇಳಿದ್ದಾರೆ.

ನಂದ ಕಿಶೋರ ಆಕ್ಷನ್ ಕಟ್ ಹೇಳಿರುವ ಮೂವಿ ಹೊಸ ಅಲೆ ಎಬ್ಬಿಸುವ ಎಲ್ಲ ಲಕ್ಷಣಗಳು ಕಾಣಸ್ತಿವೆ. ಭರ್ಜರಿ, ಅದ್ಧೂರಿ, ಬಹದ್ಧೂರ್ ಅನ್ನೋ ಮೂರು ಸೂಪರ್ ಹಿಟ್ ಚಿತ್ರಗಳನ್ನ ನೀಡಿರುವ ನಟ ಧ್ರುವ ಸರ್ಜಾ ಇದೀಗ ಪೊಗರು ತೋರಿಸಲು ರೆಡಿಯಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!