ವಿದ್ಯಾರ್ಥಿ ಸಂಸತ್ ಸಮಾರಂಭ

402

ಸಿಂದಗಿ: ಲೊಯೋಲ್ ಸಿಬಿಎಸ್ಇ ಶಾಲೆಯಲ್ಲಿ ವನಮಹೋತ್ಸವ ಹಾಗೂ ಶಾಲಾ ಸಂಸತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಮುಖ್ಯ ಅತಿಥಿಗಳಾಗಿ ಫಾದರ್ ಆಂಟೋನಿ, ಟಿ.ವಿ.ಎಸ್.ಜೆ ಪ್ರಾಚಾರ್ಯರು, ಮಾನ್ವಿ, ಅವರು ಮಾತನಾಡಿ ನಮ್ಮ ದೇಶ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿದೆ. ರಾಷ್ಟ್ರಾಧ್ಯಕ್ಷನಿಂದ ಹಿಡಿದು ಪಂಚಾಯಿತಿಯ ಸದಸ್ಯರೆಲ್ಲರೂ ಚುನಾವಣೆಯ ಮೂಲಕ ಆಯ್ಕೆಯಾಗುತ್ತಾರೆ. ಹೀಗಾಗಿ ಶಾಲಾ ಸಂಸತ್ ಮಕ್ಕಳಲ್ಲಿ ಪ್ರಜಾಪ್ರಭುತ್ವದ ಅರಿವು ಮೂಡಿಸುತ್ತೆ ಅಂತಾ ಹೇಳಿದ್ರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕರಾದ ಪಾಧರ್ ಅಲ್ವಿನ್ ಡಿಸೋಜ ಅವರು ಶಾಲಾ ಸಂಸತ್ತಿನ ನೂತನ ಸದಸ್ಯರಿಗೆ ಶುಭ ಕೋರಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮಿಲಾಗ್ರಿನ್ ಅವರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!