ಎಲ್ಲೆಲ್ಲೂ ‘ರಾಬರ್ಟ್’ ಜಾತ್ರೆ

405

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಮಾರ್ಚ್ 11, ಶಿವರಾತ್ರಿ ಹಬ್ಬದಂದು ಡಿ ಬಾಸ್ ದರ್ಶನ ನಟನೆಯ ಬಹುನಿರೀಕ್ಷಿತ ರಾಬರ್ಟ್ ಚಿತ್ರ ರಿಲೀಸ್ ಆಗಿದೆ. ಕಳೆದ ಎರಡು ವರ್ಷಗಳಿಂದ ಕಾಯುತ್ತಿದ್ದ ಅಭಿಮಾನಿಗಳು ಇದೀಗ ಹಬ್ಬ ಮಾಡುತ್ತಿದ್ದಾರೆ. ಬೆಳಗಿನ ಜಾವದಿಂದಲೇ ಶೋ ಶುರುವಾಗಿದ್ದು, ಎಲ್ಲವೂ ಹೌಸ್ ಫುಲ್ ಆಗಿವೆ.

ಕನ್ನಡ ಹಾಗೂ ತೆಲುಗು ವರ್ಷನ್ ಚಿತ್ರ ಒಟ್ಟಿಗೆ ರಿಲೀಸ್ ಆಗಿದ್ದು, ಸೌಥ್ ಸಿನಿ ದುನಿಯಾದಲ್ಲಿ ನಟ ದರ್ಶನ ಅಬ್ಬರ ಜೋರಾಗಿದೆ. ನಟ ದರ್ಶನ ಅಭಿಮಾನಿಗಳು ಚಿತ್ರ ಬಿಡುಗಡೆ ದಿನಾಂಕ ಘೋಷಣೆಯಾದ ದಿನದಿಂದಲೇ ಒಂದೊಂದು ದಿನ ವಿಶೇಷವಾಗಿ ಆಚರಿಸ್ತಿದ್ದರು. ಈಗ ಇಡೀ ರಾಜ್ಯ ಸೇರಿದಂತೆ ತೆಲುಗು ಸಿನಿ ಅಂಗಳದಲ್ಲಿಯೂ ಬಿರುಗಾಳಿ ಎದ್ದಿದೆ.

ನಟ ದರ್ಶನಗೆ ಜೋಡಿಯಾಗಿ ಆಶಾ ಭಟ ಕಾಣಿಸಿಕೊಂಡಿದ್ದಾರೆ. ಇನ್ನು ಹಿರಿಯ ನಟರಾದ ದೇವರಾಜ, ಆರಮುಗಂ ಖ್ಯಾತಿಯ ರವಿಶಂಕರ, ಚಿಕ್ಕಣ್ಣ, ಶಿವರಾಜ ಕೆ.ಆರ್ ಪೇಟೆ ಸೇರಿದಂತೆ ಬಹುದೊಡ್ಡ ತಾರಾ ಬಳಗವಿದೆ. ತರುಣ ಸುಧೀರ ಆ್ಯಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಉಮಾಪತಿಗೌಡ ಬಂಡವಾಳ ಹೂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!