ಯುವತಿಗೆ ಹೊಡೆದಿದ್ದ ಜೊಮ್ಯಾಟೊ ಸಿಬ್ಬಂದಿ ಅರೆಸ್ಟ್

318

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಯುವತಿಯೊಬ್ಬರಿಗೆ ಜೊಮ್ಯಾಟೊ ಫುಡ್ ಡಿಲೆವರಿ ಸಿಬ್ಬಂದಿಯೊಬ್ಬ ಹೊಡೆದ ಘಟನೆ ಸಂಬಂಧ ಬುಧವಾರ ಸಂಜೆ ಆತನನ್ನ ಬಂಧಿಸಲಾಗಿದೆ. ಕಾಮರಾಜ ಅನ್ನೋ ಫುಡ್ ಡಿಲೆವರಿ ಸಿಬ್ಬಂದಿಯನ್ನ ಇಲೆಕ್ಟ್ರಾನಿಕ್ ಸಿಡಿ ಪೊಲೀಸರು ಬಂಧಿಸಿದ್ದಾರೆ.

ಹಿತೇಶಾ ಚಂದ್ರಾಣಿ ಅನ್ನೋ ಯುವತಿ ಮಂಗಳವಾರ ಜೊಮ್ಯಾಟೊದಲ್ಲಿ ಮಧ್ಯಾಹ್ನ ಊಟ ಆರ್ಡರ್ ಮಾಡಿದ್ದಾಳೆ. 3.30ಕ್ಕೆ ಊಟಕ್ಕೆ ಬರುತ್ತೆ ಎಂದು ಮೆಸೇಜ್ ಬಂದಿದೆ. ಆದ್ರೆ, ಊಟ ಬಂದಿದ್ದು 4.30ಕ್ಕೆ ಅಂತೆ. ಇದರಿಂದ ಕೋಪಗೊಂಡ ಯುವತಿ ಊಟ ತಡವಾಗಿರುವ ಬಗ್ಗೆ ಮೊದ್ಲೇ ಮಾಹಿತಿ ನೀಡಿದ್ದಳಂತೆ. ಹೀಗಾಗಿ ಊಟ ಕ್ಯಾನ್ಸಲ್ ಮಾಡಿದ್ದೇನೆ ಎಂದಿದ್ದಾಳೆ.

ಈ ವೇಳೆ ಯುವತಿ ಹಾಗೂ ಜೊಮ್ಯಾಟೊ ಸಿಬ್ಬಂದಿ ನಡುವೆ ಗಲಾಟೆಯಾಗಿದೆ. ಕಾಮರಾಜ ಎಂಬಾತ ಮೂಗಿಗೆ ರಕ್ತ ಬರುವಂತೆ ಹೊಡೆದು ಹೋಗಿದ್ದಾನೆ. ಇದನ್ನ ಫೋಟೋ, ವಿಡಿಯೋ ಸಮೇತ ಹಿತೇಶಾ ಮಾಹಿತಿ ಹಂಚಿಕೊಂಡಿದ್ದಳು. ಅದು ವೈರಲ್ ಆಗಿ ಜೊಮ್ಯಾಟೋ ಸಿಬ್ಬಂದಿಯನ್ನ ಬಂಧಿಸಲಾಗಿದೆ.


TAG


Leave a Reply

Your email address will not be published. Required fields are marked *

error: Content is protected !!