ವೈಟ್ ವಾಶ್ ಆದ ಟೀಂ ಇಂಡಿಯಾ…

334

ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ಭಾರತ ಸೋಲು ಅನುಭವಿಸಿದೆ. ಈ ಮೂಲಕ ಕ್ಲೀನ್ ಸ್ವೀಪ್ ಅವಮನಾಕ್ಕೆ ಗುರಿಯಾಗಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ ಗೆಲುವಿಗೆ ಕೇವಲ 132 ಟಾರ್ಗೆಟ್ ನೀಡಲಾಗಿತ್ತು. ಇದನ್ನ 3 ವಿಕೆಟ್ ಕಳೆದುಕೊಂಡು ಕಂಪ್ಲೀಟ್ ಮಾಡಿತು.

2ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ ಕೇವಲ 90 ರನ್ ಗಳಿಸಿದ್ದ ಟೀಂ ಇಂಡಿಯಾ ಇಂದು 124 ರನ್ ಗಳಿಗೆ ಆಲೌಟ್ ಆಯ್ತು. ಈ ಮೂದ್ಲು 7 ರನ್ ಗಳ ಮುನ್ನಡೆಯಿಂದಾಗಿ 132 ರನ್ ಗಳ ಗುರಿಯನ್ನ ನ್ಯೂಜಿಲೆಂಡ್ ಗೆ ನೀಡಿತು. ಇದನ್ನ ಬೆನ್ನುಹತ್ತಿದ್ದ ಕೇನ್ ವಿಲಿಯಮ್ಸನ್ ಬಳಗ, ಸುಲಭವಾಗಿ ಮುಟ್ಟಿತು. ಓಪನರ್ ಆಟಗಾರರಾದ ಲ್ಯಾಂಥಮ್ 52 ಹಾಗೂ ಟಾಮ್ ಬ್ಲಂಡಲ್ 55 ರನ್ ಗಳಿಸಿ ಒಳ್ಳೆಯ ತಳಪಾಯ ಹಾಕಿದ್ರು. ಲ್ಯಾಂಥಮ್ ವಿಕೆಟ್ ನ್ನ ಉಮೇಶ ಯಾದವ ಪಡೆದ. ಬ್ಲಂಡಲ್ ಹಾಗೂ ಕೇನ್ ವಿಲಿಯಮ್ಸನ್ ವಿಕೆಟ್ ನ್ನ ಬೂಮ್ರಾ ಪಡೆದ. ಬಳಿಕ ಬಂದ ಟೈಲರ್ ಹಾಗೂ ಹೆನ್ರಿ ತಲಾ 5 ರನ್ ಬಾರಿಸಿ 135 ರನ್ ಬಾರಿಸಿ ಸರಣಿಯನ್ನ ವಶ ಪಡಿಸಿಕೊಂಡ್ರು.

2011-12ರ ಬಳಿಕ ಭಾರತ ತಂಡ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ ವೈಟ್ ವಾಶ್ ಆಗಿದೆ. ಇದ್ರಿಂದಾಗಿ 8 ವರ್ಷಗಳ ಬಳಿಕ ಕೊಹ್ಲಿ ಪಡೆ ಅವಮಾನ ಎದುರಿಸಿದೆ. 5 ಟಿ-20 ಸರಣಿಯನ್ನ ವೈಟ್ ವಾಶ್ ಮಾಡಿಕೊಂಡಿದ್ದ ಕೊಹ್ಲಿ ಪಡೆ 3-0 ಅಂತರದಿಂದ ಏಕದಿನ ಸರಣಿ ಹಾಗೂ 2-0 ಅಂತರದಿಂದ ಟೆಸ್ಟ್ ಸರಣಿಯನ್ನ ಸೋತಿದೆ.


TAG


Leave a Reply

Your email address will not be published. Required fields are marked *

error: Content is protected !!