ಮುಳ್ಳುಹಂದಿ ಬೇಟೆಯಾಡಿದ ಸಿಂದಗಿಯ ಯುವಕರು ಅರೆಸ್ಟ್

534

ಸಿಂದಗಿ: ಮುಳ್ಳಹಂದಿ ಬೇಟಿಯಾಡಿ ಅದನ್ನು ಸುಟ್ಟು ತಿನ್ನುವುದನ್ನ ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡಿದ ನಾಲ್ವರನ್ನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಟಿಕ್ ಟಾಕ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ಇದರ ಜಾಡು ಹಿಡಿದ ಅರಣ್ಯಾಧಿಕಾರಿಗಳು ನಾಲ್ವರನ್ನ ಬಂಧಿಸಿದ್ದಾರೆ.

ಯಡ್ರಾಮಿ ತಾಲೂಕಿನ ಬಿರಾಳ ಹಿಸ್ಸಾ ಗ್ರಾಮದ 21 ವರ್ಷದ ಮಂಜುನಾಥ ಚಂದ್ರಕಾಂತ ಬಡಿಗೇರ ಅನ್ನೋ ಯುವಕ ಸೇರಿದಂತೆ ಹೊನ್ನಳ್ಳಿ ಗ್ರಾಮದ ಮೂವರು ಯುವಕರನ್ನ ಕಲಬುರಗಿ ಜಿಲ್ಲೆ ಜೇವರ್ಗಿಯ ಅರಣ್ಯಾಧಿಕಾರಿಗಳು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.  ಮುಳ್ಳು ಹಂದಿಯನ್ನ ಎಲ್ಲಿ ಬೇಟೆಯಾಡಿದ್ರು, ಯಾವಾಗ ಆಡಿದ್ರು ಅನ್ನೋ ಮಾಹಿತಿ ಸಿಗಬೇಕಿದೆ.




Leave a Reply

Your email address will not be published. Required fields are marked *

error: Content is protected !!