ಎಲ್ಲ ವರ್ಗದ ಬಜೆಟ್: ನಿರ್ಮಲಾ ಸೀತಾರಾಮನ್

359

ನವದೆಹಲಿ: ಕೇಂದ್ರ ಬಜೆಟ್ ಅಧಿವೇಶನ ಶುರುವಾಗಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2ನೇ ಬಾರಿಗೆ ಬಜೆಟ್ ಮಂಡಿಸ್ತಿದ್ದಾರೆ. ಈ ಬಜೆಟ್ ಬಗ್ಗೆ ರಾಷ್ಟ್ರದ ಜನತೆ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದು, ಮೋದಿ ಲೆಕ್ಕಾಚಾರದ ಬಜೆಟ್ ನಲ್ಲಿ ಏನ್ ಇರಲಿದೆ ಅನ್ನೋ ಕುತೂಹಲ ಮೂಡಿದ್ದು, ಒಂದೊಂದು ವಿಚಾರಗಳನ್ನ ಹಣಕಾಸು ಸಚಿವೆ ಓದುತ್ತಿದ್ದಾರೆ.

ಬ್ಯಾಂಕಿಂಗ್ ವ್ಯವಸ್ಥೆ, ಉದ್ಯೋಗ, ಕೃಷಿ, ಶಿಕ್ಷಣ, ಆರೋಗ್ಯ, ವಸತಿ, ಸಾರಿಗೆ, ಉದ್ಯಮ ಸೇರಿದಂತೆ ಸಾಕಷ್ಟು ವಿಷಯಗಳ ಕುರಿತು ದೇಶದ ಜನತೆಗೆ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ. 2ನೇ ಬಾರಿಗೆ ಮೋದಿ ಅವರಿಗೆ ಅಧಿಕಾರ ನಡೆಸಲು ಜನಾದೇಶ ಸಿಕ್ಕಿತು. ರಾಜಕೀಯ ಸ್ಥಿರತೆಗಾಗಿ ಮೋದಿಗೆ ಮತ್ತೆ ಅವಕಾಶ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಯುವಕರು, ಹಿಂದುಳಿದವರು, ಎಸ್ಸಿ, ಎಸ್ಟಿ, ಮಹಿಳೆಯರು, ಹಿರಿಯರು ಸೇರಿದಂತೆ ಎಲ್ಲರಿಗೂ ಉತ್ತಮವಾದ ಸೌಲಭ್ಯ ನೀಡುವ ಬಜೆಟ್ ಇದಾಗಲಿದೆ ಅಂತಾ ಹೇಳಿದ್ದಾರೆ. ಸಮಾಜದ ಪ್ರತಿಯೊಂದು ವರ್ಗದ ನಿರೀಕ್ಷೆಗಳನ್ನ ಈ ಬಜೆಟ್ ಒಳಗೊಂಡಿದೆ ಅನ್ನೋ ವಿಶ್ವಾಸವನ್ನ ವ್ಯಕ್ತಪಡಿಸಿದ್ರು. ಅಲ್ದೇ 5 ವರ್ಷದಲ್ಲಿ ಸರ್ಕಾರ ಸಾಕಷ್ಟು ಸುಧಾರಣೆ ಕಂಡಿದೆ. ಆರ್ಥಿಕ ಕುಸಿತಕಕ್ಕೆ ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳಲಾಗಿದೆ ಅಂತಾ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!