ನಟಿಯರ ಜಾಮೀನಿಗಾಗಿ ಬಾಂಬ್ ಬೆದರಿಕೆ ಪತ್ರ!

304

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಅಂಗಳದಲ್ಲಿ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ಹಾಗೂ ಸಂಜನಾ ಬಂಧನವಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಜಾಮೀನು ಅರ್ಜಿ ಮುಂದೂಡುತ್ತಲೇ ಇರುವ ಹೊತ್ತಿನಲ್ಲಿ ಬಾಂಬ್ ಬೆದರಿಕೆ ಪತ್ರ ಬಂದಿದೆ.

ನಟಿಯರನ್ನ ಬಿಡುಗಡೆ ಮಾಡದಿದ್ರೆ ಬಾಂಬ್ ಹಾಕ್ತೀವಿ ಎಂದು ಎನ್ ಡಿಪಿಎಸ್ ಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ ಕರೆ ಬಂದಿದೆ. ಇನ್ನೊಂದು ಪತ್ರ ಡಿಸಿಪಿ ರವಿಕುಮಾರ ಹೆಸರಿನಲ್ಲಿ ಬಂದಿದೆ. ರಾಗಿಣಿ, ಸಂಜನಾಗೆ ಬೇಲ್ ಸಿಗದಿದ್ರೆ, ನೀವು ಹಾಗೂ ಸಂದೀಪ ಪಾಟೀಲ ಸುಮ್ಮನಿರದಿದ್ರೆ ಕಮಿಷನರ್ ಕಚೇರಿ ಸ್ಫೋಟಿಸುತ್ತೇವೆ ಎಂದು ಪತ್ರ ಬರೆಯಲಾಗಿದೆ.

ಸೋಮವಾರ ಸಂಜೆ ಪತ್ರ ಬಂದಿದ್ದು, ಪತ್ರ ಬಾಂಬ್ ಇದೆ ಎಂದು ಬರೆಯಲಾಗಿತ್ತು. ತಕ್ಷಣಕ್ಕೆ ಸ್ಥಳಕ್ಕೆ ಶ್ವಾನದಳ ಹಾಗೂ ಡಿಟೆಕ್ಟಿವ್ ಟೀಂ ಕರೆಸಿಕೊಂಡು ಪರಿಶೀಲನೆ ನಡೆಸಿದಾಗ ಕವರ್ ನಲ್ಲಿ ಡಿಟೋನೇಟರ್ ಪತ್ತೆಯಾಗಿದೆ. ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!