ಸಂಜೆ ಹೆಲ್ತ್ ಬುಲೆಟಿನ್: ಮತ್ತೆ 40 ಹೊಸ ಪ್ರಕರಣ

348

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾ ಸಂಜೆಯ ಹೆಲ್ತ್ ಬುಲೆಟಿನ್ ಬಂದಿದ್ದು, ಮತ್ತೆ 40 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಮೂಲಕ ಇಂದು 115 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ 2,533ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ಜಿಲ್ಲಾವಾರು ಸೋಂಕಿತರ ಅಂಕಿಸಂಖ್ಯೆ ಇಲ್ಲಿದೆ

ಉಡುಪಿ 29, ದಕ್ಷಿಣ ಕನ್ನಡ 24, ಹಾಸನ 13, ಬೀದರ 12, ಬೆಂಗಳೂರು ನಗರ 9, ಯಾದಗಿರಿ 7, ಚಿತ್ರದುರ್ಗ 6, ಕಲಬುರಗಿ 5, ಹಾವೇರಿ 4, ಚಿಕ್ಕಮಗಳೂರು 3, ವಿಜಯಪುರ 2, ರಾಯಚೂರು 1 ಸೋಂಕಿತ ಪ್ರಕರಣಗಳು ದಾಖಲಾಗಿವೆ.

ಇನ್ನು ಇಂದು 53 ಜನ ಬಿಡುಗಡೆಯಾಗಿದ್ದು, 834 ಜನ ಇದುವರೆಗೂ ಡಿಸ್ಚಾರ್ಜ್ ಆಗಿದ್ದಾರೆ. 1,650 ಪ್ರಕರಣಗಳು ಚಾಲ್ತಿಯಲ್ಲಿವೆ.




Leave a Reply

Your email address will not be published. Required fields are marked *

error: Content is protected !!