ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟರ್ ನಲ್ಲಿ ವಕೀಲಕಿ ಪಾಠ ಮಾಡಿದ್ದಾರೆ.
ಕುಡಿದ ಮತ್ತಿನಲ್ಲಿ ಅಪಘಾತ ಮಾಡಿ ಸಾಯಿಸಿದವರ ಬಗ್ಗೆ ಹೇಳಿದರೆ, ಸಿ.ಟಿ ರವಿ ಯಾಕೆ ಹೆಗಲು ಮುಟ್ಟಿ ನೋಡಿಕೊಳ್ತಿದ್ದಾರೆ ಎಂದು ಅರ್ಥವಾಗ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಅಲ್ದೇ, ಪ್ರತಿಕ್ರಿಯಿಸುವ ಮೊದಲು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅರಿವಿರಲಿ, ನೀವು ಆ ಖಾತೆಯ ಸಚಿವರು ಅಂತಾ ಪಾಠ ಮಾಡಿದ್ದಾರೆ.
ಕೊಲೆಗೂ ಅಪಘಾತಕ್ಕೂ ವ್ಯತ್ಯಾಸ ತಿಳಿದಿಲ್ಲವೆಂದರೆ ಸಿದ್ದರಾಮಯ್ಯ ವಕೀಲರಾಗಲು ನಾಲಾಯಕ್ ಎಂದು ಸಚಿವ ಸಿ.ಟಿ ರವಿ ವಾಗ್ದಾಳಿ ನಡೆಸಿದ್ರು. ಇದಕ್ಕೆ ಸಿದ್ದು ಟ್ವೀಟ್ ನಲ್ಲಿ ಪ್ರತ್ಯುತ್ತರ ಕೊಟ್ಟಿದ್ದಾರೆ.