ಜಿ.ಮಾದೇಗೌಡರ ನಿಧನಕ್ಕೆ ಗಣ್ಯರ ಸಂತಾಪ: ಮಧ್ಯಾಹ್ನ ಅಂತ್ಯಕ್ರಿಯೆ

663

ಪ್ರಜಾಸ್ತ್ರ ಸುದ್ದಿ

ಮಂಡ್ಯ: ನಾಡಿನ ಹಿರಿಯ ರಾಜಕಾರಣಿ, ಮಾಜಿ ಸಚಿವರು, ಮಾಜಿ ಸಂಸದರು ಆಗಿದ್ದ ಜಿ.ಮಾದೇಗೌಡರ ನಿಧನಕ್ಕೆ ಸಿಎಂ ಬಿ.ಎಸ್ ಯಡಿಯೂರಪ್ಪ ಆದಿಯಾಗಿ ಎಲ್ಲ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇಂದು ಮಧ್ಯಾಹ್ನ 4 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ಜಿ.ಮಾದೇಗೌಡರು ಬರೀ ರಾಜಕಾರಣಿಯಾಗಿರ್ಲಿಲ್ಲ. ರೈತ ಹೋರಾಟಗಾರರಾಗಿದ್ದರು. ಜನಪರ ಕಾಳಜಿ ಹೊಂದಿದ್ರು. ಜನರ ಧ್ವನಿಯಾಗಿ ಸದಾ ಪ್ರತಿಭಟನೆ, ಹೋರಾಟ, ಚಳವಳಿಗಳಲ್ಲಿ ಭಾಗವಹಿಸ್ತಿದ್ರು. ನ್ಯಾಯಕ್ಕಾಗಿ ನಿಷ್ಠರ ನುಡಿಗಳನ್ನಾಡುತ್ತಿದ್ದರು. ಹೀಗಾಗಿ ಇವರನ್ನ ಕಂಡ್ರೆ ಎಲ್ಲರಿಗೂ ಭಯವಿತ್ತು.

ಕಿರುಗಾವಲು ವಿಧಾನಸಭಾ ಕ್ಷೇತ್ರದಿಂದ ಸತತವಾಗಿ 6 ಬಾರಿ ಶಾಸಕರಾಗಿದ್ರು. ಸಚಿವರಾಗಿದ್ರು. ಸಂಸದರಾಗಿದ್ರು. ಆದ್ರೆ, ಎಲ್ಲಿಯೂ ದರ್ಪ, ಅಂಹಕಾರ ತೋರಿಸಿಲ್ಲ. ಸರಳ, ಸಜ್ಜನಿಕೆಯ ಗಾಂಧಿವಾದಿಯಾಗಿದ್ರು. ಜನಪರ ರಾಜಕಾರಣಿಯಾಗಿ ಇತರರಿಗೆ ಮಾದರಿಯಾಗಿದ್ರು. ವಯೋಸಹಜ ಕಾಯಿಲೆಯಿಂದ ಇತ್ತೀಚೆಗಷ್ಟೇ ಕೆ.ಎಂ ದೊಡ್ಡಿಯ ಆಸ್ಪತ್ರೆಗೆ ದಾಖಲಾಗಿದ್ರು.




Leave a Reply

Your email address will not be published. Required fields are marked *

error: Content is protected !!