ಅವಧಿ ಮೀರಿದ 4 ಲಕ್ಷ ಮೌಲ್ಯದ ಔಷಧಿಗಳು ವಶ: ಇಬ್ಬರ ಬಂಧನ

408

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಅವಧಿ ಮೀರಿದ ಜಾಫ್ ಸಿರಪ್ ಔಷಧಿ ದಿನಾಂಕ ತಿದ್ದಿ, ಅಕ್ರಮವಾಗಿ ಮಾರಾಟಕ್ಕೆ ಮುಂದಾದ ಇಬ್ಬರನ್ನು ಗುಮ್ಮಟನಗರಿಯ ಅಪರಾಧ ವಿಭಾಗದ ವಿಶೇಷ ಪೊಲೀಸ್ ದಳದ ತಂಡ ಪತ್ತೆ ಹಚ್ಚಿದೆ. ಸುಮಾರು 4 ಲಕ್ಷ ಮೌಲ್ಯದ ಔಷಧಿಯನ್ನು ವಶಕ್ಕೆ ಪಡೆಯಲಾಗಿದೆ.

ಪುಲಕೇಶಿ ನಗರದ ನಿರ್ಜನ ಪ್ರದೇಶದಲ್ಲಿ ಸ್ಯಾನಿಟೈಸರ್ ಬಳಸಿ ಅವಧಿ ಮೀರಿದ ಔಷಧಿಗಳ ದಿನಾಂಕ ತಿದ್ದಿ ಅಕ್ರಮವಾಗಿ ಮಾರಾಟ ಮಾಡಾಗುತ್ತಿತ್ತು. ಈ ವೇಳೆ ಅಪರಾಧ ವಿಭಾಗದ ಸಿಪಿಐ ಸುರೇಶ ಬೆಂಡೆಗುಂಬಳ ನೇತೃತ್ವದ ತಂಡ ದಾಳಿ ನಡೆಸಿದೆ. ಬಂಧಿತರನ್ನು ಮಹ್ಮದ್ ಸಾಧಿಕ್ ಸಿಖಂದರ ಭತಗುಣಕಿ ಹಾಗೂ ಮಹ್ಮದ್ ಮೈನುದ್ದೀನ್ ಕೊತ್ತಲ ಎಂದು ಗುರುತಿಸಲಾಗಿದೆ.

ಬಂಧಿತರಿಂದ ಅಕ್ರಮವಾಗಿ ಮಾರಾಟಕ್ಕೆ ಸಂಗ್ರಹಿಸಿದ್ದ 4,16,696 ರೂಪಾಯಿ ಮೌಲ್ಯದ ಅವಧಿ ಮೀರಿದ ಕಾಫ್ ಸಿರಪ್ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಅಪರಾಧ ವಿಭಾಗದ ವಿಶೇಷ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಅನುಪಮ ಅಗರವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!