ನಮೀಬಿಯಾದಿಂದ ತಂದ ಚೀತಾಗಳು ಒಂದೊಂದೆ ಸಾಯುತ್ತಿರೋದ್ಯಾಕೆ?

212

ಪ್ರಜಾಸ್ತ್ರ ಸುದ್ದಿ

ಭೋಪಾಲ್: ಕಳೆದ ಸೆಪ್ಟಂಬರ್ ತಿಂಗಳಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ 20 ಚೀತಾಗಳನ್ನು ಭಾರತಕ್ಕೆ ತರಲಾಗಿತ್ತು. ಮಧ್ಯಪ್ರದೇಶದ ಭೋಪಾಲ್ ನ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಧನಿ ಮೋದಿ ಬಿಡುಗಡೆ ಮಾಡಿದರು. ಆದರೆ, 5 ತಿಂಗಳಲ್ಲಿಯೇ ಬರೋಬ್ಬರಿ 9 ಚೀತಾಗಳು ಮೃತಪಟ್ಟಿವೆ. ಬುಧವಾರ ಮುಂಜಾನೆ ಧಾತ್ರಿ ಹೆಸರಿನ ಹೆಣ್ಣು ಚೀತಾ ಮೃತಪಟ್ಟಿದೆ.

20 ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿತ್ತು. ಇದರಲ್ಲಿ 3 ಮರಿಗಳಿಗೆ ಜನ್ಮ ನೀಡಿದ್ದರಿಂದ 23 ಚೀತಾಗಳಾಗಿದ್ದವು. ಇದರಲ್ಲಿ ಧಾತ್ರಿ ಹೆಸರಿನ ಹೆಣ್ಣು ಚೀತಾ ಸಾವಿನೊಂದಿಗೆ 9 ಚೀತಾಗಳು ಮೃತಪಟ್ಟಂತಾಗಿದೆ. ಈಗ 14 ಚೀತಾಗಳು ಉಳಿದುಕೊಂಡಿವೆ.

ಪಾರ್ಕ್ ವನ್ಯಜೀವಿ ಪಶುವೈದ್ಯರು, ನಮೀಬಿಯಾ ತಜ್ಞರು ಚೀತಾಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. ಹೀಗಿದ್ದರೂ ಚೀತಾಗಳ ಸಾವು ನಿಲ್ಲುತ್ತಿಲ್ಲ. ಇದಕ್ಕೆ ಕಾರಣ ಮಾತ್ರ ಸರಿಯಾಗಿ ತಿಳಿದು ಬರುತ್ತಿಲ್ಲ.




Leave a Reply

Your email address will not be published. Required fields are marked *

error: Content is protected !!