ದಕ್ಷಿಣ ಆಫ್ರಿಕಾದಿಂದ ತಂದಿದ್ದ ಮತ್ತೊಂದು ಚೀತಾ ಸಾವು

179

ಪ್ರಜಾಸ್ತ್ರ ಸುದ್ದಿ

ಕುನೋ: ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳಲ್ಲಿ ಇದೀಗ ಮತ್ತೊಂದು ಚೀತಾ ಮೃತಪಟ್ಟಿದೆ. ಉದಯ ಅನ್ನೋ ಚೀತಾ ಭಾನುವಾರ ಸಂಜೆ ಸಾವನ್ನಪ್ಪಿದೆ. ಈ ಮೂಲಕ ಎರಡು ಚೀತಾಗಳು ಮೃತಪಟ್ಟಿವೆ.

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಕಳೆದ ಸೆಪ್ಟೆಂಬರ್ 17ರಂದು ಮೊದಲ ಹಂತದಲ್ಲಿ 3 ಚೀತಾಗಳನ್ನು ತರಲಾಗಿದೆ. ದಕ್ಷಿಣ ಆಫ್ರಿಕಾದೊಂದಿಗೆ ಈ ಹಿಂದೆ 12 ಚೀತಾಗಳ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರಂತೆ ನಮಿಬೀಯಾದಿಂದ ತಂದ ಚೀತಾಗಳಲ್ಲಿ 2 ಚೀತಾಗಳು ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ಕಳೆದ ತಿಂಗಳು ಸಾಶಾ ಅನ್ನೋ ಚಿರತೆ ಮೃತಪಟ್ಟಿದ್ದರೆ, ಭಾನುವಾರ ಸಂಜೆ ಉದಯ ಅನ್ನೋ ಚಿರತೆ ಮೃತಪಟ್ಟಿದೆ. ಸಾಶಾ ಸಾವಿಗೆ ಕಿಡ್ನಿ ಸಮಸ್ಯೆ ಎಂದು ತಿಳಿದು ಬಂದಿತ್ತು. ಆದರೆ, ಉದಯ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.




Leave a Reply

Your email address will not be published. Required fields are marked *

error: Content is protected !!