ಅರ್ಷದೀಪ್ ಮುರಿದ ಸ್ಟಂಪ್ಸ್ ಬೆಲೆ ಎಷ್ಟು ಲಕ್ಷ ಗೊತ್ತಾ?

136

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಪಿಎಲ್ ಟೂರ್ನಿಯನ್ನು ಅಭಿಮಾನಿಗಳು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಬಹುತೇಕ ಪಂದ್ಯಗಳಲ್ಲಿ ಸ್ಕೋರ್ 200ರ ಗಡಿ ದಾಟುತ್ತಿದ್ದು, ಹೊಡಿ ಬಡಿ ಆಟ ನೋಡಲು ಅಭಿಮಾನಿಗಳು ಕ್ರೀಡಾಂಗಣಕ್ಕೆ ಲಗ್ಗೆ ಹಾಕುತ್ತಿದ್ದಾರೆ. ಟೂರ್ನಿಯ 31ನೇ ಪಂದ್ಯ ಪಂಜಾಬ್ ಹಾಗೂ ಮುಂಬೈ ನಡುವೆ ನಡೆಯಿತು.

ಮೊದಲು ಬ್ಯಾಟ್ ಮಾಡಿದ ಪಂಜಾಬ್ 215ರನ್ ಗಳಿಸಿತ್ತು. ಈ ಸ್ಕೋರ್ ಬೆನ್ನುಹತ್ತಿದ ಮುಂಬೈ ಸಹ ಗೆಲುವಿನ ಹತ್ತಿರ ಬಂದಿತ್ತು. ಆದರೆ, ಕೊನೆಯಲ್ಲಿ ಪಂಜಾಬ್ ಬೌಲರ್ ಹರ್ಷದೀಪ್ ಮಾಡಿದ ಮ್ಯಾಜಿಕ್ ನಿಂದಾಗಿ 13 ರನ್ ಗಳಿಂದ ಗೆಲುವು ಸಾಧಿಸಿತು. ಅದೇನು ಅಂದರೆ ಬ್ಯಾಕ್ ಟು ಬ್ಯಾಕ್ 2 ವಿಕೆಟ್ ಪಡೆದಿದ್ದು. ಇಲ್ಲಿ ವಿಶೇಷ ಇರುವುದು ಅರ್ಷದೀಪ್ ಪಡೆದ 2 ವಿಕೆಟ್ ಗಳು ಸ್ಟಂಪ್ ಔಟ್ ಆಗಿವೆ. ಆಗ ಎರಡು ಬಾರಿಯೂ ಸ್ಟಂಪ್ ಮುರಿದುಕೊಂಡು ಹೋಗಿವೆ.

ಕ್ಯಾಮೆರಾ, ಜಿಂಗ್ ಬೈಲ್ ಗಳೊಂದಿಗೆ ಎಲ್ ಇಡಿ ಸ್ಟಂಪ್ ಗಳು ಅತ್ಯಂತ ದುಬಾರಿ ಆಗಿವೆ. ಐಪಿಎಲ್ ಟೂರ್ನಿ ಆಟಗಾರನ ಮೂಲ ಬೆಲೆ ಒಂದು ಸ್ಟಂಪ್ ಗಿದೆಂತೆ. ಅರ್ಷದೀಪ್ ಮುರಿದಿರುವ ಒಂದು ಸ್ಟಂಪ್ ಬೆಲೆ ಸರಾಸರಿ 20 ಲಕ್ಷ ರೂಪಾಯಿಂತೆ. 2 ಸ್ಟಂಪ್ ಬೆಲೆ 40 ಲಕ್ಷ ರೂಪಾಯಿ. ಇಷ್ಟು ಮೊತ್ತ ಬಿಸಿಸಿಐಗೆ ನಷ್ಟವಾಗಿದೆ.

ತುಂಬಾ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿರುವ ಈ ಸ್ಟಂಪ್ ಗಳು ಮಾರ್ಚ್ 23, 2008ರಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ಬಳಕೆಯಾಗುವ ಮೂಲಕ ಪರಿಚಯಿಸಲಾಯಿತು. ಬಿಬಿಜಿ ಸ್ಪೋರ್ಟ್ಸ್ ಅನ್ನೋ ಕಂಪನಿ ಈ ರೀತಿಯ ವಿಕೆಟ್ ತಯಾರಿಸಿತು. ಮುಂದೆ ಜಿಂಗ್, ಇಂಟೆಲ್ ಕಂಪನಿಯ ವಿಕೆಟ್ ಗಳು ಬಂದವು. ಆದರೆ, ಇವುಗಳ ಬೆಲೆ ಕೇಳಿದರೆ ತಲೆ ತಿರುಗುವುದು ಮಾತ್ರ ಸತ್ಯ.




Leave a Reply

Your email address will not be published. Required fields are marked *

error: Content is protected !!