ಜಗತ್ತಿಗೆ ಸಂಸತ್ ಕಲ್ಪನೆ ಕೊಟ್ಟವರು ಬಸವಣ್ಣ: ರಾಹುಲ್ ಗಾಂಧಿ

101

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ: ಎಐಸಿಸಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಸವ ಜಯಂತಿಯನ್ನು ಜಿಲ್ಲೆಯ ಕೂಡಲಸಂಗಮದ ಐಕ್ಯಮಂಟಪದಲ್ಲಿ ಆಚರಣೆ ಮಾಡಿದರು. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದು ಇಳಿದ ಅವರು, ಅಲ್ಲಿಂದ ಕೂಡಲಸಂಗಮದ ಬಸವಮಂಟಕ್ಕೆ ಆಗಮಿಸಿದರು.

ಜಗತ್ತಿಗೆ ಪ್ರಜಾಪ್ರಭುತ್ವದ ಕಲ್ಪನೆ ಕೊಟ್ಟವರು ಬಸವಣ್ಣನವರು. ಸಂಸತ್ ಕಲ್ಪನೆ ನೀಡಿದವರು ಬಸವಣ್ಣನವರು. ಎಲ್ಲಡೆ ಕತ್ತಲು ಆವರಿಸಿರುವಾಗಿ ಅಲ್ಲಿಯೇ ಒಂದು ಭರವಸೆಯ ಬೆಳಕು ಮೂಡುತ್ತೆ. ಅದೆ ರೀತಿ ಬಸವಣ್ಣನವರು. ತಮ್ಮ 8ನೇ ವಯಸ್ಸಿನಲ್ಲಿಯೇ ಸಮಾಜದಲ್ಲಿನ ತಾರತಮ್ಯಗಳನ್ನು ಪ್ರಶ್ನೆ ಮಾಡುತ್ತಾ ಬಂದರು. ಜಾತಿ, ಪ್ರಜಾಪ್ರಭುತ್ವ, ಸಮಾಜದ ಬಗ್ಗೆ ಪ್ರಶ್ನೆ ಮಾಡುತ್ತಾ ಹೋಗಿ, ಅವರ ಹೃದಯದಲ್ಲಿ ಉತ್ತರ ಸಿಕ್ಕಾಗ ಅದನ್ನೇ ಪಾಲಿಸಿದರು ಎಂದರು.

ತುಂಬಾ ಜನ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ, ಅದನ್ನು ಪಾಲಿಸುವುದಿಲ್ಲ. ಸತ್ಯವನ್ನು ತಿಳಿದುಕೊಂಡು ಸಹ ಅದರ ಬಗ್ಗೆ ಮಾತನಾಡುವುದಿಲ್ಲ. ಯಾಕಂದರೆ ಅವರು ಹೆದರುತ್ತಾರೆ. ಆದರೆ, ಬಸವಣ್ಣನವರು ಹಾಗೇ ಮಾಡಲಿಲ್ಲ. ಸಮಾಜವನ್ನು ಪ್ರಶ್ನಿಸಿದರು. ಅದನ್ನು ಜಾರಿಗೆ ತರಲು ಪ್ರಯತ್ನಿಸಿದರು. ಸಮಾಜದ ಎದುರು ಸತ್ಯ ಹೇಳವುದು ತುಂಬಾ ಕಷ್ಟ. ಇದನ್ನು ಮಾಡಿದ ಬಸವಣ್ಣನವರಿಗೆ ಹೆದರಿಸಲಾಯಿತು. ಆದರೆ, ಅವರು ಹಿಂದೆ ಸರಿಯಲಿಲ್ಲ. ಈ ಕಾರಣಕ್ಕೆ ಅವರ ಪಾದಗಳಿಗೆ ಹೂವನ್ನು ಅರ್ಪಿಸಿದೇವು ಅಂತಾ ಹೇಳಿದರು.




Leave a Reply

Your email address will not be published. Required fields are marked *

error: Content is protected !!