ಮಾಜಿ ಹಾಕಿ ಆಟಗಾರ ರವೀಂದರ್ ಪಾಲ್ ಸಿಂಗ್ ನಿಧನ

228

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ಮಾಜಿ ಹಾಕಿ ಆಟಗಾರ ರವೀಂದರ್ ಪಾಲ್ ಸಿಂಗ್(65) ಕೋವಿಡ್ ಸೋಂಕಿನಿಂದ ಶನಿವಾರ ಮೃತಪಟ್ಟಿದ್ದಾರೆ. ಏಪ್ರಿಲ್ 24ರಂದು ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುಣಮುಖರಾಗಿದ್ದ ಅವರನ್ನ ಗುರುವಾರ ನಾನ್ ಕೋವಿಡ್ ವಾರ್ಡ್ ಗೆ ಸ್ಥಳಾಂತರಿಸಲಾಗಿತ್ತು. ಆದ್ರೆ, ದಿಢೀರ್ ಆರೋಗ್ಯದಲ್ಲಿ ಏರುಪೇರಾಗಿ ಶನಿವಾರ ನಿಧನರಾಗಿದ್ದಾರೆ.

1979ರಲ್ಲಿ ಜ್ಯೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಆಡಿದ್ರು. ಮುಂದೆ 1984ರಲ್ಲಿ ಒಲಿಂಪಿಕ್ ನಲ್ಲಿ ಆಡಿದ್ರು. 1980 ಹಾಗೂ 1983ರಲ್ಲಿ ಕರಾಚಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಿದ್ರು. 1982ರಲ್ಲಿ ಮುಂಬೈನಲ್ಲಿ ನಡೆದ ವಿಶ್ವಕಪ್ ಮತ್ತು ಕರಾಚಿಯಲ್ಲಿ ನಡೆದ ಏಷ್ಯ ಕಪ್ ನಲ್ಲಿ ಆಡಿರುವ ರವೀಂದರ್ ಪಾಲ್ ಸಿಂಗ್, ಒಲಿಂಪಿಕ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.




Leave a Reply

Your email address will not be published. Required fields are marked *

error: Content is protected !!