ಲಾಕ್ ಡೌನ್ ಹೊತ್ತಲ್ಲಿ ಸವದಿ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾಗಿದ್ರಾ?

805

ಅಥಣಿ: ತಾಲೂಕಿನ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾದ ಹಿಪ್ಪರಗಿ ಅಣೆಕಟ್ಟೆಯಿಂದ ಜಮಖಂಡಿ ತಾಲೂಕಿಗೆ ಇಂದು ನೀರು ಹರಿ ಬಿಡುತ್ತಾರೆ ಎಂಬ ಸುದ್ದಿ ತಿಳಿದು ರೈತ ಮುಖಂಡರು ಪ್ರತಿಭಟನೆಗೆ ಮುಂದಾದ ಘಟನೆ ನಡೆದಿದೆ.

ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಅವರ ನೇತೃತ್ವದಲ್ಲಿ, ತಾಲೂಕಿನ ಸತ್ತಿ, ಹಲ್ಯಾಳ, ದರೂರ, ನಾಗನೂರ ಪಿ.ಕೆ, ಶೇಗುಣಸಿ, ಸಪ್ತಸಾಗರ, ತೀರ್ಥ, ಅವರಖೋಡ ಸೇರಿದಂತೆ ಅನೇಕ ಗ್ರಾಮದ ರೈತ ಮುಖಂಡರುಗಳು ಹಿಪ್ಪರಗಿ ಅಣೆಕಟ್ಟಿನ ಮೇಲೆ ಅಧಿಕಾರಿಗಳ ವಿರುದ್ಧ ಹೋರಾಟಕ್ಕೆ ಮುಂದದ ಘಟನೆ ನಡೆದಿದೆ.

ಜಮಖಂಡಿ ಭಾಗದಲ್ಲಿ ಇನ್ನು ನದಿ ನೀರು ಸಾಕಷ್ಟಿದೆ. ಆದ್ರೂ ನೀರು ಬಿಡಬೇಕೆಂದು ಆ ಭಾಗದವರು ಎರಡು ತಾಲೂಕಿನ ಜನ ಪ್ರತಿನಿದಿಗಳಿಗೆ ಬೇಡಿಕೆಯಿಟ್ಟಿದ್ರು. ಇದ್ರಿಂದ ಆಕ್ರೋಶಗೊಂಡ ಅಥಣಿ ತಾಲೂಕಿನ ಜನರು ದಿಢೀರ್ ಅಣೆಕಟ್ಟಿನ ಹತ್ತಿರ ಪ್ರತಿಭಟನೆಗೆ ಮುಂದಾಗಿದ್ರು. ಅಧಿಕಾರಿಗಳು ಒಂದು ವೇಳೆ ನೀರು ಹರಿಸಿದರೆ ಈಗಿನ ಪರಿಸ್ಥಿತಿಯಲ್ಲಿ 144 ಕಲಂ ಕಾಯ್ದೆ ಜಾರಿಯಲ್ಲಿದ್ರೂ ನಾವು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತೆ ಎಂದು ಮುಖಂಡರು ಎಚ್ಚರಿಸಿದ್ದಾರೆ.

ಲೌಕ್ ಡೌನ್ ಇದೆ. 144 ಸೆಕ್ಷನ್ ಜಾರಿಯಲ್ಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿದೆ. ಅದೆಲ್ಲವನ್ನೂ ಉಲ್ಲಂಘಿಸಿ ಇಷ್ಟೊಂದು ಜನ ಸೇರಿರುವುದು ಇಲ್ಲಿನ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.




Leave a Reply

Your email address will not be published. Required fields are marked *

error: Content is protected !!