ಸರ್ಕಾರದ ವಿರುದ್ಧ ರೈತ ಸಂಘ ಗರಂ

528

ಸಿಂದಗಿ: ಕರ್ನಾಟಕ ರಾಜ್ಯದಲ್ಲಿ ರೈತರ ಸಾಗುವಳಿ ಜಮೀನುಗಳನ್ನು ಭೂಕಾಯ್ದೆಯ ನಿಯಮಗಳನ್ನ ಅನುಸರಿಸದೆ ರಾಜ್ಯ ಸರ್ಕಾರಿ ಬೇಕಾಬಿಟ್ಟಿಯಾಗಿ ವಶಪಡಿಸಿಕೊಳ್ಳುತ್ತಿದೆ ಅಂತಾ ರೈತಪರ ಸಂಘಟನೆಗಳು ಆರೋಪಿಸಿವೆ.

ಸಿಂದಗಿಯ ಅಂಬೇಡ್ಕರ್ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದ ಕರ್ನಾಟಕ ರಾಜ್ಯ ರೈತ ಸಂಘ್ಯ ಹಾಗೂ ಹಸಿರುಸೇನೆಯ ಜಿಲ್ಲಾ ಮತ್ತು ತಾಲೂಕು ನ್ಯಾಯವಾದಿಗಳು ರಸ್ತೆ ತಡೆದು ಪ್ರತಿಟನೆ ನಡೆಸಿದ್ರು. ಈ ವೇಳೆ ತಹಶೀಲ್ದಾರ್ ಬಿ.ಎಸ್ ಕಡಕಭಾವಿ ಅವರಿಗೆ ಮನವಿ ಪತ್ರ ನೀಡಲಾಯ್ತು.

ಬಳ್ಳಾರಿಯಲ್ಲಿ ಸರ್ಕಾರ 3,667 ಎಕರೆ ರೈತರ ಜಮೀನನ್ನ 1.22 ಲಕ್ಷದಿಂದ 1.50 ಲಕ್ಷದ ಕಡಿಮೆ ದರದಲ್ಲಿ ಖರಿದೀಸಿ, ಅಂದನ್ನ ಜಿಂದಾಲ್ ಫ್ಯಾಕ್ಟರಿಗೆ ಹಸ್ತಾಂತರಿಸಲು ಮುಂದಾಗಿರುವುದು, ಸರ್ಕಾರದ ಅವೈಜ್ಞಾನಿಕ ನೀತಿಯಾಗಿದೆ. ಅಲ್ದೇ, ಘೋಷಣೆ ಮಾಡಿದ 48 ಸಾವಿರ ಕೋಟಿ ರೂಪಾಯಿ ರೈತರಿಗೆ ಖಾತೆಗಳಿಗೆ ಜಮಾ ಆಗಿಲ್ಲ ಅಂತಾ ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಇದರ ಜೊತೆಗೆ ಬರ ಪರಿಹಾರ ಸಹ ರೈತರಿಗೆ ತಲುಪಿಲ್ಲ. ಹೀಗಾಗಿ ಕೂಡಲೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಇನ್ನು ಪ್ರತಿಭಟನೆ ವೇಳೆ ತಾಲೂಕಾ ಅಧ್ಯಕ್ಷ ಮಹೇಶ ನಾಗಪ್ಪ ಸವಳಸಂಗ, ಸಾಹೀಬಗೌಡ ಎಸ್ ಲಚ್ಚಾಣ, ಹಣಮಂತ ಎಂ ಬಿಜಾಪುರ, ಹೆಚ್.ಆರ್ ಬಿರಾದರ, ಬಿ.ಎಸ್ ಜಾಲವಾದಿ, ಎ.ಜಿ ಕೂಳ್ಳೂರು, ಜ್ಯೋತಿಬಾ, ಬಾಪುಗೌಡ ಚೌದರಿ, ಈರಯ್ಯ ಮಠಪತಿ, ನಿಂಗನಗೌಡ ಬಿರಾದರ, ಮಾದೇವ ಚೌರ, ಸಂಗಣ್ಣ ಸೋಮಪುರ, ಐ.ಎಲ್ ಶಹಾಬಾದಿ ಸೇರಿದಂತೆ ತಾಲೂಲು ಅಧ್ಯಕ್ಷಕರು ಹಾಗೂ ಗ್ರಾಮದ ಮುಖಂಡರು ಭಾಗವಹಿಸಿದ್ರು.


TAG


Leave a Reply

Your email address will not be published. Required fields are marked *

error: Content is protected !!