ಬ್ಲೂ ಜರ್ಸಿ ಕಳಿಚಿದ ಸ್ಫೋಟಕ ಆಟಗಾರ

619

ಯುವರಾಜ್ ಸಿಂಗ್.. ಇಂಡಿಯನ್ ಕ್ರಿಕೆಟ್ ಟೀಂನ ಮೋಸ್ಟ್ ಸ್ಟೈಲಿಸ್ ಬ್ಯಾಟ್ಸ್ ಮನ.. ಸ್ಫೋಟಕ ಎಡಗೈ ಆಟಗಾರ.. 2011ರ ವರ್ಲ್ಡ್ ಕಪ್ ಹೀರೋ.. ಟಿ-20 ವಿಶ್ವಕಪ್ ನಲ್ಲಿ ಮಿಂಚಿದ ಆಲ್ ರೌಂಡರ್..

ಯೆಸ್, ಕ್ರಿಕೆಟ್ ಅಂಗಳದಲ್ಲಿ ಇಷ್ಟೆಲ್ಲ ಸಾಧನೆ ಮಾಡಿರುವ ಯುವರಾಜ್ ಸಿಂಗ್ ಇನ್ಮುಂದೆ ಅಂಗಳಕ್ಕೆ ಇಳಿಯುವುದಿಲ್ಲ. ಬ್ಯಾಟ್ ಹಿಡಿದು ಸಿಕ್ಸ್, ಫೋರ್ ಬಾರಿಸುವುದಿಲ್ಲ. ಯಾಕಂದ್ರೆ, ಯುವ್ವಿ ತಮ್ಮ ಕ್ರಿಕೆಟ್ ಕರಿಯರ್ ಗೆ ಗುಡ್ ಬೈ ಹೇಳಿದ್ದಾರೆ. ಜೂನ್ 10, 2019 ಸೋಮವಾರ ಮುಂಬೈನಲ್ಲಿ ಅತ್ಯಂತ ನೋವಿನಿಂದ ಈ ನಿರ್ಧಾರ ಪ್ರಕಟಿಸಿದ್ದಾರೆ. ಈ ಟೈಂನಲ್ಲಿ 37 ವರ್ಷದ ಹ್ಯಾಂಡ್ಸ್ ಮ್ ಆಟಗಾರ ಕಣ್ಣೀರು ಹಾಕಿದ.

ನಿವೃತ್ತಿ ಘೋಷಣೆ ವೇಳೆ ಕಣ್ನೀರು ಹಾಕಿದ ಯುವ್ವಿ

ಟೀಂ ಇಂಡಿಯಾ ಇಂಗ್ಲೆಂಡ್ ನೆಲದಲ್ಲಿ ವರ್ಲ್ಡ್ ಕಪ್ ಆಡ್ತಿರುವ ಹೊತ್ತಿನಲ್ಲಿಯೇ ಇತ್ತ ಯುವರಾಜ್ ಸಿಂಗ್ ನಿವೃತ್ತಿ ಪ್ರಕಟಿಸಿರುವುದು, ಕ್ರಿಡಾ ಪ್ರೇಮಿಗಳಲ್ಲಿ, ಅವರ ಅಭಿಮಾನಿಗಳಲ್ಲಿ ನೋವು ತಂದಿದೆ. 2019ರ ವರ್ಲ್ಡ್ ಕಪ್ ನಲ್ಲಿ ಯುವ್ವಿ ಆಡಬೇಕಿತ್ತು ಅನ್ನೋದು ಅನೇಕ ಭಾರತೀಯ ಕ್ರಿಕೆಟ್ ಪ್ರಿಯರ ಮಾತಾಗಿತ್ತು. ಬಟ್, ಬಿಸಿಸಿಐ ಪ್ರಕಟಿಸಿದ ಪಟ್ಟಿಯಲ್ಲಿ ಯುವ್ವಿ ಹೆಸರು ಕಾಣಿಸಿಕೊಳ್ಳಲಿಲ್ಲ. ಹೀಗಾಗಿ ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿದ್ದು ಸುಳ್ಳು.

ಯುವ್ವಿ ಕ್ರಿಕೆಟ್ ಕರಿಯರ್:

ಅಕ್ಟೋಬರ್ 3, 2000ನೇ ಇಸ್ವಿಯಲ್ಲಿ ಯುವರಾಜ್ ಸಿಂಗ್ ತನ್ನ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಟವನ್ನ ಕಿನ್ಯಾ ವಿರುದ್ಧ ಶುರು ಮಾಡಿದ. 19 ವರ್ಷಗಳ ಸುದೀರ್ಘ ಆಟದಲ್ಲಿ 304 ಏಕದಿನ ಪಂದ್ಯವಾಡಿದ್ದು, ಅದರಲ್ಲಿ 278 ಇನ್ನಿಂಗ್ಸ್ ನಲ್ಲಿ 8,701 ರನ್ ಗಳನ್ನ ಬಾರಿಸಿದ್ದಾನೆ. ಇದರಲ್ಲಿ 14 ಶತಕ ಹಾಗೂ 52 ಅರ್ಧಶತಕಗಳು ಸೇರಿವೆ. 150 ಅಧಿಕ ಸ್ಕೋರ್ ಆಗಿದೆ. ಇನ್ನು 908 ಫೋರ್ ಹಾಗೂ 155 ಸಿಕ್ಸ್ ಬಾರಿಸಿದ್ದಾನೆ. ಒಟ್ಟು 87.68 ಸ್ಟ್ರೈಕ್ ರೇಟ್ ಹೊಂದಿದ್ದಾನೆ. ಇದರ ಜೊತೆಗೆ 111 ವಿಕೆಟ್ ಪಡೆದಿರುವ ಯುವ್ವಿ ಒಂದು ಬಾರಿ ಐದು ವಿಕೆಟ್ ಪಡೆದಿದ್ದಾರೆ.

ಅಕ್ಟೋಬರ್ 16, 2003ರಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವಾಡಿದ ಲೈಫ್ಟ್ ಹ್ಯಾಂಡ್ ಬ್ಯಾಟ್ಸ್ ಮನ್, ಇದುವರೆಗೂ 40 ಮ್ಯಾಚ್ ಆಡಿದ್ದಾನೆ. ಇದರಲ್ಲಿ 62 ಇನ್ನಿಂಗ್ಸ್ ಆಡಿದ್ದು 3 ಶತಕ ಹಾಗೂ 11 ಅರ್ಧಶತಕ ಸೇರಿದಂತೆ 1,900 ರನ್ ಗಳಿಸಿದ್ದಾನೆ. 163 ಅಧಿಕ ಸ್ಕೋರ್ ಆಗಿದೆ. ಟೆಸ್ಟ್ ನಲ್ಲಿ 9 ವಿಕೆಟ್ ಪಡೆದಿದ್ದಾನೆ.

ಇನ್ನು ಸ್ಕಾಟ್ ಲೆಂಡ್ ವಿರುದ್ಧ ಸೆಪ್ಟಂಬರ್ 13, 2007ರಂದು ಟಿ-20 ಪಂದ್ಯವಾಡಿದ. ಇಲ್ಲಿಯವರೆಗೂ 58 ಪಂದ್ಯಗಳನ್ನ ಆಡಿದ್ದು ಅದರಲ್ಲಿ 51 ಇನ್ನಿಂಗ್ಸ್ ಮೂಲಕ 1,177 ರನ್ ಗಳಿಸಿದ್ದಾನೆ. ಟಿ-20 ಪಂದ್ಯಗಳಲ್ಲಿ 8 ಅರ್ಧಶತಕ ಬಾರಿಸಿದ್ದಾನೆ. ಇನ್ನು 28 ವಿಕೆಟ್ ತೆಗೆಯುವ ಮೂಲಕ ತನ್ನ ಆಕ್ರಮಣಕಾರಿ ಬೌಲಿಂಗ್ ಏನು ಅನ್ನೋದು ತೋರಿಸಿದ್ದಾನೆ.

ಕ್ರಿಕೆಟ್ ಅಂಗಳದಲ್ಲಿ ಇಷ್ಟೆಲ್ಲ ಸಾಧನೆ ಮಾಡಿದ ಯುವ್ವಿ, ಜೂನ್ 30, 2017 ಕೊನೆ ಏಕದಿನ ಪಂದ್ಯ ವೆಸ್ಟ್ ಇಂಡೀಸ್ ವಿರುದ್ದ ಆಡಿದ್ದಾನೆ. ಡಿಸೆಂಬರ್ 5, 2012ರಂದು ಇಂಗ್ಲೆಂಡ್ ವಿರುದ್ಧ ಆಡಿದ ಟೆಸ್ಟ್ ಕೊನೆಯದು. ಫೆಬ್ರವರಿ 1, 2017 ಇಂಗ್ಲೆಂಡ್ ವಿರುದ್ದ ಕೊನೆಯ ಟಿ-20 ಪಂದ್ಯವಾಡಿದ್ದಾನೆ. ಇನ್ನು ಏಪ್ರಿಲ್ 19, 2008ರಲ್ಲಿ ಐಪಿಎಲ್ ಪಂದ್ಯವಾಡುವ ಮೂಲಕ ಹೊಡಿಬಡಿ ಆಟದಲ್ಲಿಯೂ ಮಿಂಚಿದ. ಕಳೆದ ಏಪ್ರಿಲ್ 3, 2019ರಂದು ಮುಂಬೈನ ವಾಖಂಡೆ ಕ್ರಿಡಾಂಗಣದಲ್ಲಿ ಚೆನ್ನೈ ವಿರುದ್ಧ ಮುಂಬೈ ಪರವಾಡಿದ್ದು ಕೊನೆಯದಾಗಿದೆ. ಇದು ಯುವರಾಜ್ ಸಿಂಗ್ ಕ್ರಿಕೆಟ್ ಬದುಕಿನ ಕಂಪ್ಲೀಟ್ ಚಿತ್ರಣ.

2011 ವರ್ಲ್ಡ್ ಕಪ್:

2011ರಲ್ಲಿ ಭಾರತ ಕ್ರಿಕೆಟ್ ದುನಿಯಾದಲ್ಲಿ ವಿಶ್ವನಾಯಕನಾಗಿ ಮಿಂಚಿತು. ಸ್ವದೇಶಿ ನೆಲದಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಆಲ್ ರೌಂಡರ್ ಆಟ ಪ್ರದರ್ಶಿಸಿದ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡ್ಂಗ್ ನಲ್ಲಿಯೂ ಮಿಂಚಿದ ಯುವ್ವಿ 28 ವರ್ಷಗಳ ಬಳಿಕ ಭಾರತ ವಿಶ್ವಕಪ್ ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ. 4 ವರ್ಲ್ಡ್ ಕಪ್ ನಲ್ಲಿ ಆಡಿದ್ರೂ ಗೆಲುವಿನ ಖುಷಿ ಕಾಣದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತಂಡೂಲ್ಕರ್ ಅಂದು ಯುವ ಆಟಗಾರರ ಶಕ್ತಿಯಿಂದ ಕಪ್ ಗೆದ್ದರು. ಸಚಿನ್ ಕನಸು ನನಸು ಮಾಡಿದ್ರು. ಇದಾದ ಬಳಿಕ ಸಚಿನ್ ನಿವೃತ್ತಿ ಘೋಷಣೆ ಮಾಡಿದ್ರು.

28 ವರ್ಷಗಳ ಬಳಿಕ ವಿಶ್ವಕಪ್ ಬರ ನೀಗಿಸಿದ ಕ್ಷಣ

ಶಾಕ್ ನೀಡಿದ ಕ್ಯಾನ್ಸರ್:

2011ರ ವರ್ಲ್ಡ್ ಕಪ್ ಖುಷಿಯಲ್ಲಿದ್ದ ಭಾರತಕ್ಕೆ ದೊಡ್ಡ ಶಾಕ್ ಕೊಟ್ಟಿದ್ದು, ಯುವ್ವಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅನ್ನೋದು. ಅಂಗಳದಲ್ಲಿ ಎದುರಾಳಿ ತಂಡದ ವಿರುದ್ಧ ಹೋರಾಡ್ತಿದ್ದ ಯುವ್ವಿ, ರಿಯಲ್ ಲೈಫ್ ನಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವಂತಾಯ್ತು. ದೇವರ ದಯೆಯಿಂದ, ಭಾರತ ಕ್ರಿಕೆಟ್ ಪ್ರೇಮಿಗಳು ಹಾಗೂ ಅಭಿಮಾನಿಗಳ ಪ್ರಾರ್ಥನೆಯ ಫಲದಿಂದ ಯುವ್ವಿ ಗುಣಮುಖರಾಗಿ ಮತ್ತೆ ಮೈದಾನಕ್ಕೆ ಇಳಿದ.

ಕ್ಯಾನ್ಸರ್ ವಿರುದ್ಧ ಗೆದ್ದ ಖುಷಿ

ಬಹುದಿನಗಳ ಕಾಲ ಕ್ಯಾನ್ಸರ್ ವಿರುದ್ಧ ಹೋರಾಡಿ ಮತ್ತೆ ಅಂಗಳಕ್ಕೆ ಬಂದ ಯುವ್ವಿ, ಅದೇ ಅಬ್ಬರದ ಆಟವನ್ನ ಸ್ವಲ್ಪ ದಿನಗಳ ಕಾಲ ನಡೆಸಿದ್ರು. 2014ರ ಟಿ-20 ಪಂದ್ಯದಲ್ಲಿಯೂ ಕೆಲ ಮ್ಯಾಚ್ ಆಡಿದ ಯುವ್ವಿ, ಅಲ್ಲಿಯೂ ಭಾರತ ಗೆಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ. ಇದಾದ್ಮೇಲೆ ಸ್ಫೋಟಕ ಬ್ಯಾಟ್ಸ್ ಮನ್ ಬ್ಯಾಟಿನಿಂದ ರನ್ ಗಳು ಬರೋದು ಕಡಿಮೆಯಾಯ್ತು. 2017ರ ಚಾಂಪಿಯನ್ಸ್ ಟ್ರೋಪಿಯಲ್ಲಿ ಆಡಿದ್ರೂ, ಹೇಳಿಕೊಳ್ಳುವ ಪ್ರದರ್ಶನ ನೀಡಲಿಲ್ಲ. ಕೆಲ ಪಂದ್ಯಗಳಲ್ಲಿ ಬೆಂಚ್ ಕಾಯಬೇಕಾಯ್ತು. ಇದೆಲ್ಲ ಮುಗಿದ್ಮೇಲೆ ಯುವ್ವಿ ಸೀಮಿತ ಓವರ್ ಗಳ ಆಟಕ್ಕೆ ಆಯ್ಕೆ ಆಗದೆ ಹೋದ್ರು. ಹೀಗಾಗಿ 2017ರಲ್ಲಿ ಆಡಿದ ಪಂದ್ಯಗಳೇ ಕೊನೆಯದಾದ್ವು.

ಮಿಸ್ ಆಯ್ತು 15-19ರ ವರ್ಲ್ಡ್ ಕಪ್:

2014ರ ಟಿ-20 ವರ್ಲ್ಡ್ ಕಪ್ ಬಳಿಕ ಯುವ್ವಿ ಆಟ ಮಂಕಾಯ್ತು. ಮೊದಲ ವೇಗವಾಗ್ಲಿ, ಸ್ಫೋಟಕ ಆಟವಾಗ್ಲಿ ಇರ್ಲಿಲ್ಲ. ಹೀಗಾಗಿ ಯುವರಾಜ್ ಸಿಂಗ್ ಎರಡ್ಮೂರು ವರ್ಷ ಅಂತಾರಾಷ್ಟ್ರೀಯ ಪಂದ್ಯಗಳನ್ನೇ ಆಡ್ಲಿಲ್ಲ. ಅದರಲ್ಲಿ ಪ್ರಮುಖವಾಗಿ 2015ರ ವರ್ಲ್ಡ್ ಕಪ್ ಮಿಸ್ ಆಯ್ತು. ಇದೀಗ ಲಂಡನ್ ನಲ್ಲಿ ನಡೆಯುತ್ತಿರುವ 2019ರ ವರ್ಲ್ಡ್ ಕಪ್ ಸಹ ಮಿಸ್ ಆಗಿದೆ. ಈ ಎಲ್ಲ ನೋವು ಯುವ್ವಿಗೆ ಕಾಡದೇ ಇರೋದಿಲ್ಲ. 2011ರ ವರ್ಲ್ಡ್ ಕಪ್ ನಲ್ಲಿ ಹೀರೋ ಆಗಿದ್ದವನು, ಮುಂದಿನ ನಾಲ್ಕು ವರ್ಷಗಳಲ್ಲಿ ಫಾರ್ಮ್ ಕಳೆದುಕೊಂಡಿದ್ದ. ಬಹುಶಃ ಕ್ಯಾನ್ಸರ್ ಯುವ್ವಿಯನ್ನ ಹಿಂಡಿ ಹಿಪ್ಪಿ ಮಾಡಿತ್ತು. ಅದರಲ್ಲಿ ಗೆದ್ದು ಬಂದಿದ್ರೂ, ದೈಹಿಕವಾಗಿ ಕುಗ್ಗಿದ್ದು ಸುಳ್ಳಲ್ಲ.

ಆಟಕ್ಕೆ ಗುಡ್ ಬೈ ಹೇಳಿದ ಟೈಂನಲ್ಲಿ ತಾಯಿ ಹಾಗೂ ಪತ್ನಿ ಜೊತೆ

ಅದೇನೆ ಇರ್ಲಿ, ಇಷ್ಟು ವರ್ಷಗಳ ಕಾಲ ಇಂಡಿಯನ್ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ನೀಡಿದ ಯುವ್ವಿ ಮುಂದಿನ ಲೈಫ್ ಚೆನ್ನಾಗಿರ್ಲಿ ಅನ್ನೋದು ಎಲ್ಲರ ಆಸೆಯಾಗಿದೆ.

ಚಿತ್ರ ಕೃಪೆ: ಇಂಟರ್ ನೆಟ್



Leave a Reply

Your email address will not be published. Required fields are marked *

error: Content is protected !!