ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಿಲಾಡಿ!

413

ಬೆಂಗಳೂರು: ಆತ ಮಹಾನ್ ಚಾಲಕಿ ಮನುಷ್ಯ. ತಪ್ಪುಗಳ ಮೇಲೆ ತಪ್ಪುಗಳನ್ನ ಮಾಡ್ತಿದ್ರೂ ಪೊಲೀಸರ ಕೈಗೆ ಮಾತ್ರ ಸಿಕ್ಕಿ ಬೀಳ್ತಿರ್ಲಿಲ್ಲ. ಎಲ್ಲ ಟೈಂ ಒಂದೇ ರೀತಿ ಇರಬೇಕಿಲ್ಲ. ಹೀಗಾಗಿ ಆ ಕಿಲಾಡಿ ಸಂಚಾರಿ ಪೊಲೀಸ್ರ ಕೈಗೆ ತಗ್ಲಹಾಕಿಕೊಂಡಿದ್ದಾನೆ.

ಜಾಲಹಳ್ಳಿ ನಿವಾಸಿಯಾದ ಮೊಹಮ್ಮದ ಶಬ್ಬೀರ ಅನ್ನೋ ಆಸಾಮಿ ಬರೋಬ್ಬರಿ 104 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದ. ಇಷ್ಟಾದ್ರೂ ಪೊಲೀಸ್ರ ಕೈಗೆ ಸಿಕ್ಕಿಬಿದ್ದಿರ್ಲಿಲ್ಲ. ಇದೀಗ ಆತನ ಟೈಂ ಕೈಕೊಟ್ಟು ಖಾಕಿ ಕೈಯಲ್ಲಿ ಸಿಕ್ಕಿಬಿದ್ದು 10 ಸಾವಿರ ರೂಪಾಯಿ ದಂಡವನ್ನ ಸ್ಥಳದಲ್ಲಿಯೇ ವಸೂಲಿ ಮಾಡಲಾಗಿದೆ ಎಂದು ಜಾಲಹಳ್ಳಿ ಸಂಚಾರಿ ಠಾಣೆ ಪೊಲೀಸ್ರು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!