12 ಗಂಟೆ ಕಳೆದರೂ ಆರದ ಬೆಂಕಿ

282

ಪ್ರಜಾಸ್ತ್ರ ಸುದ್ದಿ

ಮುಂಬೈ: ವಾಣಿಜ್ಯನಗರಿಯ ಸಿಟಿ ಸೆಂಟರ್ ಮಾಲ್ ನಲ್ಲಿ ಗುರುವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡ 12 ಗಂಟೆ ಕಳೆದ್ರೂ ಇನ್ನೂ ಆರುತ್ತಿಲ್ಲ. 20 ಅಗ್ನಿಶಾಮಕ ದಳದ ವಾಹನಗಳು ಸ್ಥಳದಲ್ಲಿದ್ದು ಭರ್ಜರಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.

ಈಗಾಗ್ಲೇ 3,500ಕ್ಕೂ ಹೆಚ್ಚು ಜನರನ್ನ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಬೆಂಕಿಯ ಕೆನ್ನಾಲಿಗೆ 4ನೇ ಮಹಡಿಯ ತನಕ ಹಬ್ಬಿದೆ. ಹೀಗಾಗಿ ಬೆಂಕಿ ನಂದಿಸುವ ಕೆಲಸ ಸಾಕಷ್ಟು ಕಷ್ಟದಿಂದ ಕೂಡಿದೆ. ಅಲ್ದೇ, ಈ ವೇಳೆ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದ ಆಸ್ಪತ್ರೆಗೆ ದಾಖಲಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!