ಬಿಲ್ಡಪ್ ಪಿಎಸ್ಐ ಸಸ್ಪೆಂಡ್

331

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹದಿಂದ ಜನರು ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಸೇನಾ ಪಡೆ ಸಹ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಆದ್ರೆ, ಇಲ್ಲೊಬ್ಬ ಪಿಎಸ್ಐ ಇದನ್ನೇ ತನ್ನ ಬಿಲ್ಡಪ್ ಗೆ ಬಳಸಿಕೊಂಡು ಅಮಾನತುಗೊಂಡಿದ್ದಾನೆ.

ಪ್ರವಾಹದಲ್ಲಿ ಮೇಕೆ ಮರಿ ರಕ್ಷಣೆ ಮಾಡಿರುವಂತೆ ಪೋಸ್ ಕೊಟ್ಟಿದ್ದ. ಮೊಳಕಾಲುವರೆಗೂ ಇರುವ ನೀರಿನಲ್ಲಿ ಬೋಟ್ ನಲ್ಲಿ ಹಾಗುವ ಸ್ಟೈಲ್ ನೀಡಿದ್ದ. ಇದ್ರಿಂದಾಗಿ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಾಗಿತ್ತು. ಇದೀಗ ಜೇವರ್ಗಿ ತಾಲೂಕಿನ ನೆಲೋಗಿ ಠಾಣೆಯ ಪಿಎಸ್ಐ ಐ ಮಲ್ಲಣ್ಣ ಯಲಗೊಂಡ ಅವರನ್ನ ಅಮಾನತು ಮಾಡಲಾಗಿದೆ.

ಬಿಲ್ಡಪ್ ಪಿಎಸ್ಐ ಅವತಾರ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆತನ ವರ್ತನೆಗೆ ಮುಳುವಾಗಿದೆ. ಕಲಬುರಗಿ ಎಸ್ಪಿ ಡಾ.ಸಿಮಿ ಮಾರಿಯಾ ಜಾರ್ಜ್ ಅವರು ಪಿಎಸ್ಐ ಯಲಗೊಂಡರನ್ನ ಸಸ್ಪೆಂಡ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!