ಇಂಡಿಯನ್ ಕ್ರಿಕೆಟ್ ಟೀಂ ಮಾಜಿ ನಾಯಕ ಬೇಡಿ ನಿಧನ

231

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಎಡಗೈ ಸ್ಪಿನ್ನರ್ ಆಗಿದ್ದ ಬಿಷನ್ ಸಿಂಗ್ ಬೇಡಿ(77) ಅವರು ಸೋಮವಾರ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದು, ಬಿಸಿಸಿ ಸೇರಿದಂತೆ ಕ್ರೀಡೆ ಹಾಗೂ ಇತರೆ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅಮೃತಸರದಲ್ಲಿ ಜನಿಸಿದ ಬಿಷನ್ ಸಿಂಗ್ ಬೇಡಿ ಅವರು ದಶಕಗಳ ಕಾಲ ಸ್ಪಿನ್ ವಿಭಾಗದಲ್ಲಿ ಖ್ಯಾತಿ ಗಳಿಸಿದ್ದರು. 14 ಬಾರಿ ಐದು ವಿಕೆಟ್ ಗಳಿಸಿದ ಸಾಧನೆ ಮಾಡಿದ್ದಾರೆ. 67 ಟೆಸ್ಟ್ ಪಂದ್ಯಗಳಿಂದ 266 ವಿಕೆಟ್ ಪಡೆದಿದ್ದಾರೆ. ಇವರ ಸಾಧನೆಗೆ 1970ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!