ಬಹುತ್ವ-ವೈವಿಧ್ಯತೆ ಭಾರತದ ಆತ್ಮ: ಮಾಜಿ ರಾಷ್ಟ್ರಪತಿ

372

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕಳವಳ ವ್ಯಕ್ತಪಡಿಸಿದ್ದಾರೆ. ನಾರ್ಥ್ ಈಸ್ಟ್ ಇನ್ ಸ್ಟಿಟೂಟ್ ಆಫ್ ಅಡ್ವಾನ್ಸ್ಡ್ ಸ್ಟೆಡೀಸ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉಪನ್ಯಾಸ ನೀಡಿದ ಅವರು, ವೈವಿಧ್ಯತೆ ಭಾರತದ ಅಸ್ಮಿತೆಯಾಗಿದೆ ಅಂತಾ ಹೇಳಿದ್ದಾರೆ.

ದೇಶದಲ್ಲಿ 122 ಭಾಷೆ, 1600 ಆಡುಭಾಷೆ ಬಳಸುವ 1.3 ಬಿಲಿಯನ್ ಜನರಿದ್ದಾರೆ. 7 ಪ್ರಮುಖ ಧರ್ಮದವರು 3 ಪ್ರಮುಖ ಜನಾಂಗೀಯದವರು ಭಾರತ ಒಂದೇ, ಒಂದೇ ಧ್ವಜದಲ್ಲಿ ಬದುಕುವ ಬಹುತ್ವ ಮತ್ತು ವೈವಿಧ್ಯತೆಯ ಆತ್ಮವಾಗಿದೆ ಅಂತಾ ಹೇಳಿದ್ದಾರೆ.

ಅಹಿಂಸೆ ಎಂಬುವುದು ಭಾರತೀಯರ ನೀತಿಯಾಗಿದೆ. ಆಧುನಿಕ ಯುಗದಲ್ಲಿ ಗಾಂಧೀಜಿ ಅದರ ಸಮರ್ಥ ಪ್ರಚಾರಕರಾಗಿದ್ರು. ಅಹಿಂಸೆ, ಸಹಿಷ್ಟುತೆ ಹಾಗೂ ಪರಸ್ಪರ ಗೌರವ ನೀಡುವಲ್ಲಿ ಗಾಂಧೀಜಿಯವರಿಗಿದ್ದ ನಂಬಿಕೆಯನ್ನ ಉಳಿಸಿಕೊಳ್ಳಬೇಕಾಗಿದೆ ಅಂತಾ ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!