ಕನ್ನಡ ಸೇರಿ 4 ಭಾಷೆಗಳಲ್ಲಿ ದಂಬಾಗ್-3 ಟ್ರೇಲರ್ ರಿಲೀಸ್

368

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ ಖಾನ, ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಕಿಚ್ಚ ಸುದೀಪ, ನಟಿ ಸೋನಾಕ್ಷಿ ಸಿನ್ಹಾ ನಟನೆಯ ದಂಬಾಗ್-3 ಚಿತ್ರದ ಟ್ರೇಲರ್ ಭರ್ಜರಿಯಾಗಿ ರಿಲೀಸ್ ಆಗಿದೆ. ಕರ್ನಾಟಕ, ಚೆನ್ನೈ, ಹೈದ್ರಾಬಾದ್ ಹಾಗೂ ಮುಂಬೈನಲ್ಲಿ ಏಕಕಾಲದಲ್ಲಿಯೇ ಟ್ರೇಲ್ ರಿಲೀಸ್ ಆಗಿದೆ.

ಕನ್ನಡಿಗ ಪ್ರಭುದೇವ ನಿರ್ದೇಶನ ಮಾಡಿರುವ ಚಿತ್ರ ಡಿಸೆಂಬರ್ 20ರಂದು ಬಿಡುಗಡೆಯಾಗ್ತಿದೆ. ಕನ್ನಡದಲ್ಲಿ ಬರ್ತಿರುವ ಸಿನ್ಮಾಗೆ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ನಿರ್ದೇಶಕ ಗುರುದತ ಗಾಣಿಗ ಸಂಭಾಷಣೆ ಬರೆದಿದ್ದಾರೆ. ಹಾಡುಗಳಿಗೆ ಅನೂಪ ಭಂಡಾರಿ ಸಾಹಿತ್ಯ ಬರೆದಿದ್ದಾರೆ. ಇನ್ನು ಟ್ರೇಲರ್ ಬಿಡುಗಡೆ ವೇಳೆ ನಟ ಸಲ್ಮಾನ ಖಾನ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಧ್ಯಮದ ಜೊತೆ ಮಾತ್ನಾಡಿದ್ರು. ಸುದೀಪ ಕನ್ನಡದ ಟ್ರೇಲರ್ ನ್ನ ತಮ್ಮ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಟ ಕಿಚ್ಚ ಸುದೀಪ ಬಗ್ಗೆ ಸಲ್ಮಾನ ಖಾನ ಹಾಡಿ ಹೊಗಳಿದ್ದಾರೆ. ಸಹೋದರ ಸೋಹಿಲ ಮೂಲಕ ಮೊದಲ ಪರಿಚಯವಾಯ್ತು. ಅವರೊಬ್ಬ ಒಳ್ಳೆಯ ವ್ಯಕ್ತಿ. ಶ್ರಮಜೀವಿ ಎಂದು ಕೊಂಡಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಸುದೀಪ ಸೂಪರ್ ಸ್ಟಾರ್ ಆಗಿದ್ದಾರೆ. ಹೀಗಾಗಿ ಅವರನ್ನ ಆಯ್ಕೆ ಮಾಡಿಕೊಂಡೆವು ಎಂದು ಸಲ್ಲು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!