ಜಿಂಬಾಬ್ವೆ ಲೆಜೆಂಡ್ ಕ್ರಿಕೆಟಿಗ ಹಿತ್ ಸ್ಟ್ರೀಕ್ ಸಾವಿನ ಸುದ್ದಿ ಸುಳ್ಳು

273

ಪ್ರಜಾಸ್ತ್ರ ಸುದ್ದಿ

ಜಿಂಬಾಬ್ವೆ ತಂಡದ ಮಾಜಿ ಕ್ರಿಕೆಟಿಗ, ಲೆಜೆಂಡ್ ಹಿತ್ ಸ್ಟ್ರೀಕ್ ಅವರ ಸಾವಿನ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಾರಿದಾಡುತ್ತಿದೆ. ಕ್ಯಾನ್ಸರ್ ನಿಂದ ಬಳಲುತ್ತಿರುವ 49 ವರ್ಷದ ಹಿತ್ ಮೃತಪಟ್ಟಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದು ಸುಳ್ಳು, ಅವರು ಬದುಕಿದ್ದಾರೆ ಎಂದು ಮಾಜಿ ಬೌಲರ್ ಹೆನ್ರಿ ಓಲಾಂಗ್ ಎಕ್ಸ್ ನಲ್ಲಿ ಬರೆದಿದ್ದಾರೆ.

ಈ ಮೊದಲು ಓಲಾಂಗ್ ಸಹ ಮೃತಪಟ್ಟಿದ್ದಾರೆ ಎಂದು ಬರೆದುಕೊಂಡಿದ್ದರು. ನಂತರ ಅದನ್ನು ಡಿಲೀಟ್ ಮಾಡಿದ್ದಾರೆ. ಅವರೊಂದಿಗೆ ವಾಟ್ಸಪ್ ನಲ್ಲಿ ಮಾತನಾಡಿದ್ದೇನೆ ಎಂದು ಸ್ಕ್ರೀನ್ ಶಾಟ್ ನ್ನು ಎಕ್ಸ್ ನಲ್ಲಿ ಶೇರ್ ಮಾಡುವ ಮೂಲಕ ಹಿತ್ ಸ್ಟ್ರೀಕ್ ಬದುಕಿದ್ದಾರೆ ಅಂತಾ ಹೇಳಿದ್ದಾರೆ.

ಹಿತ್ ಸ್ಟ್ರೀಕ್ 65 ಟೆಸ್ಟ್ ಪಂದ್ಯಗಳಿಂದ 216 ವಿಕೆಟ್, 189 ಏಕದಿನ ಪಂದ್ಯಗಳಿಂದ 239 ವಿಕೆಟ್ ಪಡೆದಿದ್ದು, 4 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು 2005ರಲ್ಲಿ ಕೊನೆಯದಾಗಿ ಪಂದ್ಯವಾಡಿದರು.




Leave a Reply

Your email address will not be published. Required fields are marked *

error: Content is protected !!