ಜಿಂಬಾಬ್ವೆ ಕ್ರಿಕೆಟ್ ಟೀಂ ಮಾಜಿ ನಾಯಕ ಹೀತ್ ನಿಧನ

135

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್(49) ಭಾನುವಾರ ನಿಧನರಾಗಿದ್ದಾರೆ. ಈ ಕುರಿತು ಪತ್ನಿ ನಾಡಿನ್ ಸ್ಟ್ರೀಕ್ ಮಾಹಿತಿ ಹಂಚಿಕೊಂಡಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹೀತ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಕೆಲ ದಿನಗಳ ಹಿಂದೆಯೇ ಹೀತ್ ನಿಧನದ ಸುಳ್ಳು ಸುದ್ದಿ ಹಬ್ಬಿತ್ತು. ಹೀತ್ ಸಹ ಆಟಗಾರನಾಗಿದ್ದ ಹೆನ್ರಿ ಒಲಂಗಾ ಸಹ ಅಂದು ಸಾವಿನ ಸುದ್ದಿ ಹಂಚಿಕೊಂಡು, ನಂತರ ಅದು ಸುಳ್ಳು. ಹೀತ್ ಬದುಕಿದ್ದಾರೆ ಎಂದು ಹೇಳಿದ್ದರು.




Leave a Reply

Your email address will not be published. Required fields are marked *

error: Content is protected !!