ವಿಶ್ವಕಪ್ ಸೋಲು.. ಫ್ರಾನ್ಸ್ ನ ಬೆನ್ಜೆಮಾ ನಿವೃತ್ತಿ

140

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಜಗತ್ತಿನ ಕ್ರೀಡಾಲೋಕ ಎದುರು ನೋಡುತ್ತಿದ್ದ ಫುಟ್ಬಾಲ್ ವಿಶ್ವಕಪ್ ಗೆ ತೆರೆ ಬಿದ್ದಿದೆ. ಫ್ರಾನ್ಸ್ ಎದುರು ಅರ್ಜೆಂಟೀನಾ ಗೆದ್ದು ಬೀಗಿದೆ. ಈ ಸೋಲಿನಿಂದ ಫ್ರಾನ್ಸ್ ನಲ್ಲಿ ಸಾಕಷ್ಟು ಅನಾಹುತಗಳು ನಡೆದಿವೆ. ಇನ್ನು ಸೋಲಿನಿಂದ ನಿರಾಸೆ ಹೊಂದಿದ ಫ್ರಾನ್ಸ್ ಆಟಗಾರ ಕರೀಂ ಬೆನ್ಜೆಮಾ ನಿವೃತ್ತಿ ಘೋಷಿಸಿದ್ದಾರೆ.

ತಮ್ಮ 35 ವರ್ಷದ ಹುಟ್ಟು ಹಬ್ಬದ ದಿನದಂದೆ ಸ್ಟ್ರೈಕರ್ ಆಟಗಾರ ಬೆನ್ಜೆಮಾ ನಿವೃತ್ತಿ ಘೋಷಿಸಿದ್ದು, ಇಲ್ಲಿಯವರೆಗೂ ತಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಫ್ರಾನ್ಸ್ ಪರ 97 ಪಂದ್ಯಗಳಲ್ಲಿ 37 ಬಾರಿ ಗೋಲುಗಳನ್ನು ಬಾರಿಸಿ ಬ್ಯಾಲನ್ ಡಿ ಓವರ್ ವಿಜೇತರಾಗಿದ್ದಾರೆ. ಆದರೆ, ವಿಶ್ವಕಪ್ ಟೂರ್ನಿಯ ಆರಂಭದ ಹಿಂದಿನ ದಿನ ತರಬೇತಿಯಲ್ಲಿ ಗಾಯಗೊಂಡು ಟೂರ್ನಿಯಿಂದ ಹೊರಗುಳಿದಿದ್ದರು.




Leave a Reply

Your email address will not be published. Required fields are marked *

error: Content is protected !!