ಅರ್ಜೆಂಟೀನಾ ಚಾಂಪಿಯನ್.. ಕನ್ನಡತಿ ದೀಪಿಕಾ ಐತಿಹಾಸಿಕ ಸಾಧನೆ

227

ಪ್ರಜಾಸ್ತ್ರ ಕ್ರೀಡಾ ಸುದ್ದಿ

ದೋಹಾ: ವಿಶ್ವ ಕ್ರೀಡಾ ಜಗತ್ತು ಕುತೂಹಲದಿಂದ ಎದುರು ನೋಡುತ್ತಿದ್ದ ಫಿಫಾ ಫುಟ್ಬಾಲ್ ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಭರ್ಜರಿ ಗೆಲುವು ಸಾಧಿಸುವ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ಫ್ರಾನ್ಸ್ ತಂಡವನ್ನು 4-2 ಗೋಲುಗಳಿಂದ ಮಣಿಸಿದ ಅರ್ಜೆಂಟೀನಾ 3ನೇ ಬಾರಿಗೆ ವಿಶ್ವಕಪ್ ತನ್ನ ಮುಡಿಗೇರಿಸಿಕೊಂಡಿತು. ಫುಟ್ಬಾಲ್ ದಂತೆಕಥೆ ಡಿಯೆಗೊ ಮರಡೋನಾ 1986ರಲ್ಲಿ ಮಾಡಿದ್ದ ಮ್ಯಾಜಿಕ್ ಅನ್ನು 36 ವರ್ಷಗಳ ಬಳಿಕ ಮರಭೂಮಿ ನೆಲದಲ್ಲಿ ಮೆಸ್ಸಿ ಮಾಡಿದರು. ಇದರೊಂದಿಗೆ ಸತತ 2ನೇ ಬಾರಿಗೆ ಚಾಂಪಿಯನ್ ಆಗಬೇಕೆಂದು ಫ್ರಾನ್ಸ್ ಕನಸು ನುಚ್ಚು ನೂರು ಮಾಡಿದರು.

ಚಿನ್ನದ ಟ್ರೋಫಿಗೆ ಮುತ್ತಿಟ್ಟ ಮೆಸ್ಸಿ

ಲುಸೈಲ್ ಕ್ರೀಡಾಂಗಣದಲ್ಲಿ ಭಾನುವಾರ ತಡರಾತ್ರಿ ನಡೆದ ಪಂದ್ಯವನ್ನು ಕೋಟ್ಯಾಂತರ ಅಭಿಮಾನಿಗಳು ಕಣ್ತುಂಬಿಕೊಂಡರು. ಅರ್ಜೆಂಟೀನಾ ಹಾಗೂ ವಿಶ್ವ ಫುಟ್ಬಾಲ್ ಸ್ಟಾರ್ ಪ್ಲೇಯರ್ ಲಿಯೋನ್ ಮೆಸ್ಸಿ ನಾಲ್ಕು ಬಾರಿ ಕಪ್ ಎತ್ತಿ ಹಿಡಿಯಬೇಕು ಅನ್ನೋ ಕನಸು ನನಸಾಗಿರಲಿಲ್ಲ. ಆದರೆ 5ನೇ ಬಾರಿಗೆ ಅದು ನನಸಾಗಿದೆ. 1978, 1986ರ ಬಳಿಕ 2023ರಲ್ಲಿ ಅರ್ಜೆಂಟೀನಾ ಫುಟ್ಬಾಲ್ ಜಗತ್ತಿನ ಚಾಂಪಿಯನ್ ಆಯಿತು.

ಟೋಫಿ ಅನಾವರಣಗೊಳಿಸಿದ ನಟಿ ದೀಪಿಕಾ ಪಡುಕೋಣೆ

ಕನ್ನಡತಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಫಿಫಾ ವರ್ಲ್ಡ್ ಕಪ್ ಟ್ರೂಫಿಯನ್ನು ಅನಾವರಣಗೊಳಿಸುವ ಮೂಲಕ ವಿಶ್ವದ ಮೂಲೆ ಮೂಲೆಯಲ್ಲಿ ಭಾರತದ ಹೆಸರನ್ನು ಮತ್ತಷ್ಟು ಬೆಳಗಿದರು. ಈ ಒಂದು ಗೌರವಕ್ಕೆ ಪಾತ್ರರಾದ ನಟಿ ದೀಪಿಕಾ, ಪಠಾಣ್ ಚಿತ್ರದ ಮೂಲಕ ತಮ್ಮನ್ನು ಟೀಕಿಸುತ್ತಿರುವವರಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ.

ಫಿಫಾ ಟ್ರೂಫಿ ಅನಾವರಣಗೊಳಿಸಿದ ಭಾರತದ ಮೊದಲ ನಟಿ ಅನ್ನೋ ಇತಿಹಾಸ ಬರೆದರು. 18 ಕ್ಯಾರೇಟ್ ಚಿನ್ನದ 6.157 ಕೆಜಿ ತೂಕದ ಟೂಫಿಯನ್ನು ಫ್ಯಾನೀಶ್ ಮಾಜಿ ಫುಟ್ಬಾಲ್ ಆಟಗಾರ ಲಕೆರ್ ಫೆರ್ನಾಂಡಜ್ ಅವರೊಂದಿಗೆ ಬಿಡುಗಡೆಗೊಳಿಸದರು.




Leave a Reply

Your email address will not be published. Required fields are marked *

error: Content is protected !!