ದೀಪಿಕಾ ಬಗ್ಗೆ ಪ್ರಭಾಸ್ ಹೇಳಿದ್ದೇನು?

132

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಭಾರತೀಯ ಚಿತ್ರರಂಗದ ಸ್ಟಾರ್ ನಟ ಪ್ರಭಾಸ್, ಮೊದಲ ಬಾರಿಗೆ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿ ರಂಗದಲ್ಲಿ ಇವರಿಬ್ಬರು ದೊಡ್ಡ ಮೈಲುಗಲ್ಲು ಸಾಧಿಸಿದ್ದಾರೆ. ಕಲ್ಕಿ 2898 ಎಡಿ ಅನ್ನೋ ಚಿತ್ರದಲ್ಲಿ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.

ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ವೇಳೆ ಮಾತನಾಡಿದ ನಟ ಪ್ರಭಾಸ್, ನಟಿ ದೀಪಿಕಾ ಪಡುಕೋಣೆ ದೊಡ್ಡ ಸ್ಟಾರ್ ನಟಿ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಅತ್ಯಂತ ಸುಂದರ ನಟಿ. ಅವರ ನಟನೆ ತುಂಬಾ ಇಷ್ಟ. ಎಂದೆಂದಿಗೂ ಅವರನ್ನು ಪ್ರೀತಿಸುತ್ತೇನೆ. ಅವರೊಂದಿಗೆ ಕೆಲಸ ಮಾಡಬೇಕು ಎಂದುಕೊಂಡಿದ್ದ ಆಸೆ ಈಡೇರಿದೆ ಅಂತಾ ಹೇಳಿದ್ದಾರೆ.

ಕಲ್ಕಿ 2898 ಎಡಿ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿದ್ದಾರೆ. ಸೈಂಟಿಫಿಕ್ ಕಥೆಯನ್ನು ಈ ಚಿತ್ರ ಹೊಂದಿದೆ. ಇದರಲ್ಲಿ ಬಿಗ್ ಬಿ, ಕಮಲ್ ಹಾಸನ್, ಪಶುಪತಿ, ದಿಶಾ ಪಟಾನಿ ಅವರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೈಜಯಂತಿ ಮೋವಿಸ್ ಬ್ಯಾನರ್ ಅಡಿಯಲ್ಲಿ ಅಸ್ವಾನಿ ದತ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಮುಂದಿನ ಜನವರಿ 12ರಂದು ರಿಲೀಸ್ ಆಗಲಿದೆ.




Leave a Reply

Your email address will not be published. Required fields are marked *

error: Content is protected !!