ಪುತ್ರಿಯ ಸರಸ್ವತಿ ಪೂಜೆ ಫೋಟೋ ಹಂಚಿಕೊಂಡ ಶೆಮಿ ವಿರುದ್ಧ ಅಶ್ಲೀಲ ವಾಗ್ದಾಳಿ

358

ಭಾರತ ತಂಡದ ಫಾಸ್ಟ್ ಬೌಲರ್ ಮೊಹಮ್ಮದ ಶೆಮಿ ತಮ್ಮ ಪುತ್ರಿ ಸರಸ್ವತಿ ಪೂಜೆ ಮಾಡಿರುವ ಫೋಟೋವನ್ನ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಶೆಮಿ, ತುಂಬಾ ಮುದ್ದಾಗಿ ಕಾಣ್ತಿದಿಯಾ. ಲವ್ ಯೂ ಸೋ ಮಚ್. ದೇವರು ಒಳ್ಳೆಯದು ಮಾಡಲಿ. ಬೇಗ ಬಂದು ನಿನ್ನನ್ನುನ ಕಾಣ್ತೀನಿ ಮಗಳೆ ಎಂದು ಟ್ವೀಟ್ ಮಾಡಿದ್ದಾರೆ.

ಹೀಗೆ ಫೋಟೋ ಶೇರ್ ಮಾಡಿದ್ದಕ್ಕೆ ಅನೇಕರು ಶೆಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನೀನೊಬ್ಬ ಮುಸ್ಲಿಂನಾಗಿ ಹೀಗೆ ಪೂಜೆ ಮಾಡೋದು ದ್ರೋಹ. ನೀನು ಹಿಂದೂವಾಗಿ ಮತಾಂತರಗೊಳ್ಳುವುದಾದ್ರೆ ಅದು ನಿನ್ನಿಷ್ಟ. ಇನ್ನು ಕೆಲವರು ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದಾರೆ.

ಇನ್ನೂ ಅನೇಕರು ಶೆಮಿ ಬೆಂಬಲಕ್ಕೆ ನಿಂತಿದ್ದು, ನೀವು ನಿಜವಾದ ಭಾರತೀಯರು. ಇಲ್ಲಿ ಧರ್ಮ ಮುಖ್ಯವಲ್ಲ. ತಂದೆ ಮಗಳು ನಿಜವಾದ ಭಾರತೀಯರು. ಹಿಂದೂ ಮುಸ್ಲಿಂ ಧರ್ಮೀಯರಾಗಿ ಅಲ್ಲವೆಂದು ಟ್ವೀಟ್ ಮಾಡಿದ್ದಾರೆ. ತನ್ನ ಮಗಳ ಖುಷಿಯನ್ನ ಓರ್ವ ತಂದೆಯಾಗಿ ಅದನ್ನ ಹಂಚಿಕೊಂಡ್ರೆ, ಅದಕ್ಕೆ ಧರ್ಮದ ಲೇಪನ ಹಚ್ಚಿ ಮಾತ್ನಾಡುವುದು ಎಷ್ಟು ಸರಿ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!