ಬೂಮ್ರಾ ದಾಳಿಗೆ ಬಟ್ಲರ್ ಪಡೆ ಬೋಲ್ಡ್

280

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ. ಅದು ಜಸ್ಪ್ರೀತ್ ಬೂಮ್ರಾ ದಾಳಿಗೆ ಆಂಗ್ಲರು ನಲುಗಿದ್ದಾರೆ. 7.2 ಓವರ್ ಗಳಲ್ಲಿ 19 ರನ್ ಗಳಿಗೆ ಬರೋಬ್ಬರಿ 6 ವಿಕೆಟ್ ಕಬಳಿಸುವ ಮೂಲಕ ಬಟ್ಲರ್ ಟೀಂ ಬೆನ್ನೆಲುಬು ಮುರಿದಿದ್ದಾರೆ.

ಇನ್ನು ಬೂಮ್ರಾಗೆ ಶೆಮಿ ಸಾಥ್ ನೀಡಿ 3 ವಿಕೆಟ್ ಪಡೆದರು. ಈ ಮೂಲಕ ಏಕದಿನ ಪಂದ್ಯಗಳಲ್ಲಿ 150 ವಿಕೆಟ್ ಗಳಿಸಿದರು. ಪ್ರಸಿದ್ಧ 1 ವಿಕೆಟ್ ಪಡೆದ. ಇದರ ಪರಿಣಾಮ 25.2 ಓವರ್ ಗಳಲ್ಲಿ 110 ರನ್ ಗಳಿಗೆ ಆಲೌಟ್ ಆಗಿದೆ. ಕ್ಯಾಪ್ಟನ್ ಬಟ್ಲರ್ 30,  ಡೆವಿಡ್ ವಿಲ್ಲಿ 21, ಬ್ರೈಡನ್ 15 ರನ್ ಗಳೇ ಗರಿಷ್ಠವಾಗಿವೆ.

ಘಟಾನುಘಟಿ ಆಟಗಾರರಾದ ರೂಟ್, ರಾಯ್, ಸ್ಟೋಕ್ಸ್, ಲಿವಿಂಗ್ ಸ್ಟನ್ ಡಕೌಟ್ ಆಗುವ ಮೂಲಕ ಪೆವಿಲಿಯನ್ ಹಾದಿ ಹಿಡಿದರು. ಹೀಗಾಗಿ ಭಾರತದ ಎದುರು ಇಂಗ್ಲೆಂಡ್ ಮೊದಲ ಬಾರಿಗೆ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಿದೆ. ರೋಹಿತ್ ಶರ್ಮಾ ಬಳಗ 111 ರನ್ ಗಳಿಸಬೇಕಿದೆ. ಇಂಗ್ಲೆಂಡ್ ವಿರುದ್ಧ 3 ಏಕದಿನ ಪಂದ್ಯಗಳು ನಡೆಯಲಿವೆ.




Leave a Reply

Your email address will not be published. Required fields are marked *

error: Content is protected !!