ಭಾರತಕ್ಕೆ ಭರ್ಜರಿ ಗೆಲುವು

261

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇಂಗ್ಲೆಂಡ್ ವಿರುದ್ಧ 3 ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಜೋಶ್ ಬಟ್ಲರ್ ಪಡೆ ನೀಡಿದ್ದ 110 ರನ್ ಗಳ ಸಾಧಾರಣ ಗುರಿಯನ್ನು 18.4 ಓವರ್ ಗಳಲ್ಲಿ ತಲುಪಿದೆ.

ನಾಯಕ ರೋಹಿತ್ ಶರ್ಮಾ 76(5 ಸಿಕ್ಸ್, 7 ಫೋರ್) ಹಾಗೂ ಶಿಖರ್ ಧವನ್ 31(4 ಫೋರ್) ರನ್ ಗಳನ್ನು ಬಾರಿಸಿ 10 ವಿಕೆಟ್ ‌ಗಳ ಅಂತರದಿಂದ ವಿಜಯ ಸಾಧಿಸಿತು.

ಬೂಮ್ರಾ 6, ಶಮಿ 3 ವಿಕೆಟ್‌ ಗಳನ್ನು ಪಡೆದು ಇಂಗ್ಲೆಂಡ್ ತಂಡಕ್ಕೆ ಆಘಾತ ನೀಡಿದರೆ, ಬ್ಯಾಟಿಂಗ್ ನಲ್ಲಿ ರೋಹಿತ್, ಧವನ್ ಶಾಕ್ ಕೊಟ್ಟು ಅನಾಯಾಸವಾಗಿ ಗೆಲುವು ಸಾಧಿಸಿದರು.




Leave a Reply

Your email address will not be published. Required fields are marked *

error: Content is protected !!