ನಿರ್ದೇಶಕರ ಫೋಟೋ ಹಿಂದೆ ಮಿನುಗುತಾರೆ ಕೈ ಬರಹ

413

ನಟಿ ಕಲ್ಪನಾ ಅಂದ್ರೆ ಸಾಕು ಅವರ ನಟನೆಯ ಸಾಲು ಸಾಲು ಸೂಪರ್ ಹಿಟ್ ಚಿತ್ರಗಳು ಕಣ್ಮುಂದೆ ಬರುತ್ತವೆ. 70, 80ರ ದಶಕದಲ್ಲಿ ಮಿನುಗುತಾರೆ ಕಲ್ಪನಾ ಮಾಡಿದ ಮೋಡಿ ನಿಜಕ್ಕೂ ಅದ್ಭುತ. ಅವರ ಸಹಜ ಅಭಿನಯಕ್ಕೆ ಮನಸೋಲದವರೆ ಇಲ್ಲ. ಆದ್ರೆ, ಇಂಥಾ ನಟಿಯ ಸಾವು ಮಾತ್ರ ದುರಂತ.

ಇದೀಗ ಆ ನಟಿಯ ಕೈಬರಹವಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಸೌಂಡ್ ಮಾಡ್ತಿದೆ. ನಿರ್ದೇಶಕ ರಘುರಾಮ ಅವರು ಚಿಕ್ಕವನಿರುವಾಗಿನ ಫೋಟೋ ಹಿಂದೆ ನಟಿ ಕಲ್ಪನಾ ಕೈಬರಹದ ಶುಭಾಶಯ ಹಾಗೂ ಸಹಿ ಇದೆ. ಇದನ್ನ ನಿರ್ದೇಶಕರು ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.

ನಿರ್ದೇಶಕ ರಘುರಾಮ

ಚೆಲುವೆ ನಿನ್ನ ನೋಡಲು, ಮಿಸ್ಸಿಂಗ್ ಬಾಯ್, ಫೇರ್ ಆ್ಯಂಡ್ ಲವ್ಲಿ ಚಿತ್ರಗಳನ್ನ ನಿರ್ದೇಶನ ಮಾಡಿರುವ ಡೈರೆಕ್ಟರ್ ಹಾಗೂ ಆ್ಯಕ್ಟರ್ ರಘುರಾಮ ತಾಯಿ ಮತ್ತು ಕಲ್ಪನಾ ಸ್ನೇಹಿತೆಯರಂತೆ. ಆಗ್ಲೇ ತಮ್ಗೆ ಆಶೀರ್ವಾದ ಮಾಡಿ ಬರೆದಿರುವ ಕೈಬರಹ ಹಾಗೂ ತಮ್ಮ ಫೋಟೋವನ್ನ ಹಂಚಿಕೊಳ್ಳುವ ಮೂಲಕ ಕಲ್ಪನಾ ಅವರನ್ನ ನೆನಪು ಮಾಡಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!