ಅಂಧತ್ವ ಮೀರಿ ಇತರರ ನೆರವಿಗೆ ನಿಂತ ಮಹಿಳೆ

379

ಮುಧೋಳ: ಸರ್ಕಾರದಿಂದ ಸಿಗುವ ಯೋಜನೆಗಳಿಂದ ದೂರ ಉಳಿದ ಶೋಷಿತರು, ದಲಿತರು, ದೇವದಾಸಿಯ ಕುಟುಂಬಗಳನ್ನ ಗುರುತಿಸಿ, ಒಂದು ತಿಂಗಳಿಗೆ ಆಗುವಷ್ಟು ದಿನಸಿಯ ಕಿಟ್ ನೀಡಲಾಗಿದೆ.

ಬೆಂಗಳೂರಿನ ಆಕ್ಷನೇಡ್ ಸಂಸ್ಥೆಯ ಮುಧೋಳ ತಾಲೂಕ ಮೇಲ್ವಿಚಾರಕರಾದ ಶಿವಾನಂದ ಹಣಮಂತ ಮ್ಯಾಗೇರಿ ಹಾಗೂ ಸಂಸ್ಥೆಯ ರೀಜಿನಲ್ ಮ್ಯಾನೇಜರ್ ನಂದಿನಿ ಅವರ ಮಾರ್ಗದರ್ಶನದಲ್ಲಿ, ಮುಧೋಳ ತಾಲೂಕಿನ ಸೋರಗಾಂವ, ಬರಗಿ, ಗುಲಗಾಲ ಜಂಬಗಿ, ಒಂಟಗೋಡಿ, ನಾಗರಾಳ, ಮಾಲಾಪೂರ ಸೇರಿದಂತೆ ಸುತ್ತಲಿನ ಗ್ರಾಮಗಳ ಶೋಷಿತ ವರ್ಗದ ನೂರಾರು ಕುಟುಂಬಗಳಿಗೆ ನೆರವಾದರು.

ಈ ವೇಳೆ ಮಾತ್ನಾಡಿದ ಶಿವಾನಂದ ಮ್ಯಾಗೇರಿ, ಈ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಲು ಹೆಮ್ಮೆ ಇದೆ. ನಮ್ಮ ಸಂಸ್ಥೆ 20 ವರ್ಷಗಳಿಂದ ಸಮಾಜಮುಖಿಯಾಗಿ ಸೇವೆ ಮಾಡುತ್ತಾ ಬಂದಿದ್ದು, ನೆರೆ ಸಂತ್ರಸ್ತರಿಗೆ ಸಹ ಕಿಟ್ ವಿತರಣೆ ಮಾಡಿದ್ದೇವೆ, ಸ್ಕೂಲ್ ಮಕ್ಕಳಿಗೆ ಬ್ಯಾಗ್ ವಿತರಿಸಿದ್ದೇವೆ. ಸಂಸ್ಥೆಯ ನಂದಿನಿ ಮೇಡಂ ಸಹಾಯ ಮಾಡುತ್ತಲೇ ಬಂದಿದ್ದಾರೆ ಎಂದರು.

ನಂದಿನಿ

ನಮ್ಮ ಸಂಸ್ಥೆ ಎಂದೆಂದಿಗೂ ಶೋಷಿತರು ವರ್ಗದವರ ಪಾಲಿಗೆ ಆಸರೆಯಾಗಿರುತ್ತದೆ. ಸೊರಗಾಂವ್ ಗ್ರಾಮದಲ್ಲಿ ಕಿಟ್ ವಿತರಣೆ ಮಾಡಿದ ತಾಲೂಕ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಕೊರಡ್ಡಿ ಹಾಗೂ ಪಿಡಿಓ ಮತ್ತು ಗ್ರಾಮದ ಮುಖಂಡರಿಗೆ ಧನ್ಯವಾದಗಳು.

ನಂದಿನಿ, ಆಕ್ಷನೆಡ್ ರೀಜಿನಲ್ ಮ್ಯಾನೇಜರ್

ಹೀಗೆ ಆಕ್ಷನೆಟ್ ಸಂಸ್ಥೆ, ಕರೋನಾ ಲಾಕ್ ಡೌನ್ ಟೈಂನಲ್ಲಿ ಬಡವರಿಗೆ ಸಹಾಯ ಮಾಡುವ ಮೂಲಕ ಅವರ ನೆರವಿಗೆ ನಿಂತಿದ್ದಾರೆ. ಈ ಬಗ್ಗೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.




Leave a Reply

Your email address will not be published. Required fields are marked *

error: Content is protected !!