ಹೆಲ್ತ್ ಬುಲೆಟಿನ್: 2 ಸಾವಿರ ದಾಟಿದ ಸೋಂಕಿತರ ಸಂಖ್ಯೆ

362

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮಧ್ಯಾಹ್ನ ಕರೋನಾ ಹೆಲ್ತ್ ಬುಲೆಟಿನ್ ಇಂದು ತುಂಬಾ ಲೇಟಾಗಿ ಬಂದಿದ್ದು, 97 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಮೂಲಕ 2056ಕ್ಕೆ ಸೋಂಕಿನ ಸಂಖ್ಯೆ ಏರಿಕೆಯಾಗಿದೆ. ಇನ್ನು ಇಂದು 26 ಜನ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಒಟ್ಟು 634 ಜನ ಗುಣಮುಖರಾಗಿದ್ದಾರೆ.

ಇನ್ನು ರಾಜ್ಯದಲ್ಲಿ 1378 ಸೋಂಕಿತ ಪ್ರಕರಣಗಳು ಚಾಲ್ತಿಯಲ್ಲಿವೆ. ಇದುವರೆಗೂ 42 ಜನರ ಕರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು ಜಿಲ್ಲಾವಾರು ನೋಡುವುದಾದರೆ..

ಉಡುಪಿ 17, ಚಿಕ್ಕಬಳ್ಳಾಪುರ 25, ಹಾಸನ 14, ದಕ್ಷಿಣ ಕನ್ನಡ 1, ಉತ್ತರ ಕನ್ನಡ 2, ಮಂಡ್ಯ 15, ಯಾದಗಿರಿ 6, ವಿಜಯಪುರ 1, ಧಾರವಾಡ 1, ಕೊಡಗು 1, ಕಲಬುರಗಿ 6, ದಾವಣಗೆರೆ 4, ತುಮಕೂರು 1, ಉಡುಪಿ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ 97ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!