ಸಿಂದಗಿಯಲ್ಲಿ ಆಶ್ರಿತ ಮಳೆ ಬಲು ಜೋರು

439

ಸಿಂದಗಿ: ಕಳೆದ ಮೂರ್ನಾಲ್ಕು ದಿನಗಳಿಂದ ಪಟ್ಟಣದಲ್ಲಿ ಮಳೆ ಚೆನ್ನಾಗಿ ಬರ್ತಿದೆ. ಇಷ್ಟು ದಿನಗಳ ಕಾಲ ಮಳೆಯಿಲ್ಲದೆ ಬೆಳೆಯಲ್ಲ ಒಣಗಿ ಹೋಗ್ತಿದ್ವು. ಒಂದ್ಕಡೆ ಪ್ರವಾಹ. ಇನ್ನೊಂದ್ಕಡೆ ಬರಗಾಲ ಅನ್ನೋ ಸ್ಥಿತಿಯಾಗಿತ್ತು. ಸದ್ಯ ಆಶ್ರಿತ ಮಳೆ ಈ ಭಾಗದ ಜನರ ಮೊಗದಲ್ಲಿ ಒಂದಿಷ್ಟು ಖುಷಿ ತಂದಿದೆ.

ಕನಕದಾಸ ಸರ್ಕಲ್ ಬಳಿಯ ಓಣಿಯಲ್ಲಿ ನೀರು ತುಂಬಿಕೊಂಡಿರುವುದು

ಪಟ್ಟಣದಲ್ಲಿ ಮಲೆನಾಡಿನ ವಾತಾವರಣ ನಿರ್ಮಾಣವಾಗಿದ್ದು ಮಳೆ ಒಮ್ಮೆ ಜೋರು ಬಂದ್ರೆ, ಮತ್ತೊಮ್ಮೆ ಜಿಟಿಜಿಟಿ. ಮಳೆ ನಿಂತಿದೆ, ಹೊರಗೆ ಹೋಗೋಣ ಅನ್ನುವಷ್ಟರಲ್ಲಿ ಸುರಿಯಲು ಶುರು ಮಾಡುತ್ತೆ. ಹೀಗಾಗಿ ಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ನೌಕರರು, ಕೆಲಸಕ್ಕೆ ಹೋಗುವ ಜನ, ಸರ್ಕಾರಿ ಕಚೇರಿಗೆ ಬರುವ ಸಾರ್ವಜನಿಕರು ಸೇರಿದಂತೆ ಪ್ರತಿಯೊಬ್ಬರು ಆಶ್ರಿತ ಮಳೆಗೆ ಒಂದಿಷ್ಟು ಪಿಚಿಪಿಚಿ ಅಂತಿದ್ದಾರೆ.

ಬಸವೇಶ್ವರ ಸರ್ಕಲ್

ಇನ್ನು ಮಳೆಯಿಂದಾಗಿ ಸಣ್ಣಪುಟ್ಟ ಅಂಗಡಿಗಳಲ್ಲಿ ಅಷ್ಟೊಂದು ವ್ಯಾಪ್ಯಾರವಿಲ್ಲ. ಗ್ರಾಹಕರು ಇಲ್ಲದೆ ವ್ಯಾಪಾರದಲ್ಲಿ ಸ್ವಲ್ಪ ಏರುಪೇರಾಗ್ತಿದೆ.

ಅಂಜುಮಾನ್ ಕಾಲೇಜು ಮೈದಾನ
ಕಾಲೇಜ್ ರೋಡ್



Leave a Reply

Your email address will not be published. Required fields are marked *

error: Content is protected !!