ಗಮನಂ ಕನ್ನಡ ಟ್ರೇಲರ್ ರಿಲೀಸ್

261

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸುಜನಾ ರಾವ್ ನಿರ್ದೇಶನದ ಗಮನಂ ಚಿತ್ರದ ಕನ್ನಡ ಟ್ರೇಲರ್ ರಿಲೀಸ್ ಆಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಗಮನಂ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ನಟಿ ಶ್ರೇಯಾ ಶರಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಗಮನಂ ಚಿತ್ರ ನಿರ್ಮಾಣವಾಗ್ತಿದೆ. ಕ್ರಿಯಾ ಫಿಲ್ಮ್ಸ್ ಕಾರ್ಪ್ ಬ್ಯಾನರ್ ಮೂಲಕ, ವೆಂಕಿ ಪುಶದಾಪು, ರಮೇಶ ಕರುತೂರಿ, ಜ್ಞಾನಶೇಖರ ವಿ.ಎಸ್ ಸೇರಿ ನಿರ್ಮಾಣ ಮಾಡ್ತಿದ್ದಾರೆ.

ಇನ್ನು ಈ ಚಿತ್ರಕ್ಕೆ ಸಾಯಿ ಮಾಧವ ಬುರಾ ಸಂಭಾಷಣೆ ಇದೆ. ಇಳಿಯರಾಜ ಅವರ ಸಂಗೀತವಿದೆ. ರಂಗಭೂಮಿ ಕಲಾವಿದೆಯಾಗಿ, ಹಲವು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿರುವ ಸುಜನಾ ರಾವ್, ಗಮನಂ ಮೂಲಕ ನಿರ್ದೇಶಕಿಯಾಗಿ ಕಾಣಿಸಿಕೊಳ್ತಿದ್ದಾರೆ. ನಟಿ ನಿತ್ಯ ಮೆನನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!