ಬ್ರೇಕಿಂಗ್ ನ್ಯೂಸ್
Search

ದೇಶದ ನಂಬರ್ 1 ದಾನಶೂರ ಅಜೀಮ್ ಪ್ರೇಮಜಿ

544

ಪ್ರಜಾಸ್ತ್ರ ಸುದ್ದಿ

ಮುಂಬೈ: ಜಗತ್ತಿನ ಉದ್ಯಮಿಗಳಲ್ಲಿ ಗುರುತಿಸಿಕೊಂಡಿರುವ ಭಾರತದ ಶ್ರೀಮಂತರ ಪಟ್ಟಿಯಲ್ಲಿರುವ ವಿಪ್ರೋ ಕಂಪನಿಯ ಮಾಜಿ ಅಧ್ಯಕ್ಷ ದೇಶದ ನಂಬರ್ 1 ದಾನಶೂರ ಕರ್ಣನಾಗಿದ್ದಾರೆ. ಕಳೆದ ಒಂದು ವರ್ಷ ಅವಧಿಯಲ್ಲಿ ಬರೋಬ್ಬರಿ 7,904 ಕೋಟಿ ದಾನ ಮಾಡಿದ್ದಾರೆ. ಅಂದ್ರೆ, ದಿನಕ್ಕೆ 22 ಕೋಟಿ ರೂಪಾಯಿ.

ಕಳೆದ 426 ಕೋಟಿ ದಾನ ಮಾಡಿದ್ದ ಅಜೀಮ್ ಪ್ರೇಮಜಿ ಈ ವರ್ಷದ ಅದರ ಹತ್ತು ಪಟ್ಟು ಕೊಟ್ಟಿದ್ದಾರೆ. ಎಚ್ ಸಿಎಲ್ ಕಂಪನಿ ಶಿವ ನಾಡರ್ 826 ಕೋಟಿ ಹಾಗೂ ರಿಲಯನ್ಸ್ ಕಂಪನಿಯ ಮುಖೇಶ ಅಂಬಾನಿ 458 ಕೋಟಿ ನೀಡುವ ಮೂಲಕ 2 ಹಾಗೂ 3ನೇ ಸ್ಥಾನದಲ್ಲಿದ್ದಾರೆ.

ಹುರುನ್ ರಿಪೋರ್ಟ್ ಇಂಡಿಯಾ ಮತ್ತು ಎಡೆಲ್ಗವ್ ಫೌಂಡೇಷನ್ ಜೊತೆಯಾಗಿ ದಾನಿಗಳ ಪಟ್ಟಿಯನ್ನ ರೆಡಿ ಮಾಡಿವೆ. ದೇಶದ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಜೀಮ್ ಪ್ರೇಮಜಿ ಇಷ್ಟೊಂದು ದಾನ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!