ಗಣೇಶಮೂರ್ತಿಗಳ ಮೇಲಿನ ನಿರ್ಬಂಧ ಹಿಂಪಡೆಯಲು ಡಿಕೆಶಿ ಒತ್ತಾಯ

273

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಗಣೇಶ ಹಬ್ಬಕ್ಕೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿದ್ದು, ಎಲ್ಲೆಡೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕೋವಿಡ್ 19 ಸೋಂಕಿನ ಕಾರಣಕ್ಕೆ ಸರ್ಕಾರ ಸಾರ್ವಜನಿಕ ಗಣೇಶೋತ್ಸವದ ಮೇಲೆ ಹಲವು ನಿರ್ಬಂಧಗಳನ್ನು ಹೇರಿದೆ. ಈ ಬಗ್ಗೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ, ಗಣೇಶಮೂರ್ತಿಗಳ ಮೇಲಿನ ನಿರ್ಬಂಧ ಹಿಂಪಡೆಯಬೇಕು ಎಂದಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ, ಮನೆಗಳಲ್ಲಿ 2 ಅಡಿ ಎತ್ತರದ ಗಣೇಶಮೂರ್ತಿ ಪ್ರತಿಷ್ಠಾಪನೆಯ ಆದೇಶ ಹೊರಡಿಸಲಾಗಿದೆ. ಇದು ಅರ್ಥವಿಲ್ಲದ್ದು. ಇದರಿಂದಾಗಿ ಮೂರ್ತಿ ತಯಾರಿಕರ ಜೀವನದ ಮೇಲೆ ಪೆಟ್ಟು ಬೀಳಲಿದೆ. ಹೀಗಾಗಿ ತಕ್ಷಣವೇ ಈ ಆದೇಶ ಹಿಂದಕ್ಕೆ ಪಡೆಯಬೇಕು ಎಂದಿದ್ದಾರೆ.

ಕಳೆದ 2 ತಿಂಗಳಲ್ಲಿ ಲಕ್ಷಾಂತರ ಗಣೇಶಮೂರ್ತಿ ತಯಾರಿಸಲಾಗಿದೆ. ಈಗ ಹೊಸ ನಿರ್ಬಂಧಗಳನ್ನು ವಿಧಿಸಿದರೆ, ಮೂರ್ತಿ ತಯಾರಕರು ಸಂಕಷ್ಟಕ್ಕೆ ಸಿಲುಕುತ್ತಾರೆ. ಸರ್ಕಾರ ಈ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!