ಪೌರತ್ವ ಕಾಯ್ದೆ ವಿರೋಧಿಸಿ ಸಿಂದಗಿಯಲ್ಲಿ ಬೃಹತ್ ಪ್ರತಿಭಟನಾ ಸಭೆ

1249

ಸಿಂದಗಿ: ಎನ್ಆರ್ ಸಿ ಹಾಗೂ ಸಿಎಎ ವಿರೋಧಿಸಿ ಪಟ್ಟಣದಲ್ಲಿಂದು ಬೃಹತ್ ಪ್ರತಿಭಟನಾ ಸಭೆ ನಡೆಸಲಾಯ್ತು. ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪಟ್ಟಣದ ಅಂಜುಮಾನ್ ಈದ್ಗಾ ಮೈದಾನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನಾ ಸಭೆ ನಡೆಸಲಾಯ್ತು. ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಕೇಂದ್ರದ ವಿರುದ್ಧ ಶಾಂತಿಯುತವಾಗಿ ಪ್ರತಭಟನೆ ನಡೆಸಿದ್ರು.

ಈ ವೇಳೆ ಮಾತ್ನಾಡಿದ ಮೌಲನಾ ಜಮೀರ ಉಮ್ರ ಅವರು, ಮೋದಿ ಅವರು ಕೆಲವೇ ಕೆಲವು ಜನರ ಪ್ರಧಾನಿಯಲ್ಲ. 130 ಕೋಟಿ ಜನರ ಪ್ರಧಾನಿ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಹೇಳಿದ್ರಿ. ಚೌಕಿದಾರ್ ಅಂದ್ರಿ. ಎಲ್ಲ ಧರ್ಮಿಯರನ್ನ ಸಮಾನರಾಗಿ ಕಾಣಬೇಕು ಅಂತಾ ಹೇಳಿದ್ರಿ. ಆದ್ರೆ, ಇದೀಗ 20 ಕೋಟಿ ಜನರ ಅಜೆಂಢಾ ರೂಪಿಸಲು ಹೊರಟ್ಟಿದ್ದೀರಿ. ಹಿಂದೂಸ್ಥಾನದ ಸಂವಿಧಾನ ಉಳಿಸುವ ಕೆಲಸವಾಗಬೇಕಿದೆ ಅಂತಾ ಹೇಳಿದ್ರು.

ಡಾ.ದಸ್ತಗೀರ ಮುಲ್ಲಾ ಮಾತ್ನಾಡ್ತಿರುವುದು

ಹಫೀಜ ಗಿರ್ದಾಜ ಮಾತ್ನಾಡಿ, ಭಾರತದಿಂದ ಬ್ರಿಟಿಷರನ್ನ ಓಡುಸುವಲ್ಲಿ ನಡೆದ ಹೋರಾಟದಲ್ಲಿ ಮುಸ್ಲಿಂರ ಪಾತ್ರ ಬಹುದೊಡ್ಡದಿದೆ ಅಂತಾ ಹೇಳಿದ್ರು. ಸಂವಿಧಾನ ವಿರೋಧಿಯಾದ ಕಾಯ್ದೆಯನ್ನ ನಾವು ವಿರೋಧಿಸುತ್ತೇವೆ. ಈ ನೆಲದ ಮೂಲ ನಿವಾಸಿಗಳಾದ ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಲಕ್ಷ್ಮಿಬಾಯಿ ಹಾಗೂ ಟಿಪ್ಪು ಸುಲ್ತಾನ್ ರಂತ ಹೋರಾಟಗಾರರು ಹಿಂದೂಸ್ಥಾನಕ್ಕಾಗಿ ಪ್ರಾಣ ನೀಡಿದ್ದಾರೆ ಎಂದ್ರು. ಅವರ ಸಂತತಿ ನಾವು ಅಂದ್ರು.

ಎಸ್.ಎಂ ಪಾಟೀಲ ಮಾತ್ನಾಡ್ತಿರುವುದು

ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಡಾ.ದಸ್ತಗೀರ ಮುಲ್ಲಾ ಮಾತ್ನಾಡಿ, ಎನ್ಆರ್ ಸಿ ಹಾಗೂ ಸಿಎಎ ಬಗ್ಗೆ ಗೊಂದಲವನ್ನ ಮಾಡಿಕೊಳ್ಳದೆ ಅದನ್ನ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿದೆ. ಈ ದೇಶದ ಮೂಲ ನಿವಾಸಿಗಳನ್ನ ವಿದೇಶಿಗರೆಂದು ಹೇಳುವ ದೊಡ್ಡ ಕುತಂತ್ರವಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು. ನಾವು ಜಾತಿವಾದಿಗಳಲ್ಲ. ಈ ದೇಶವನ್ನ ಕಟ್ಟಿ ಬೆಳೆಸಿದ ಮೂಲ ನಿವಾಸಿಗಳು ವಾರಸ್ತಾದರರು ಅಂತಾ ಹೇಳಿದ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನ ಮಾತನ್ನ ನೆನಪಿಸಿಕೊಳ್ಳಬೇಕಿದೆ ಎಂದ್ರು. ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರಿಗೆ ತಾಕತ್ತು ಇದ್ರೆ ಡಿಎನ್ಎ ಆಧಾರದ ಮೇಲೆ ಪೌರತ್ವ ಕಾಯ್ದೆ ತಿದ್ದುಪಡಿ ಮಾಡ್ಲಿ ಅಂತಾ ಸವಾಲು ಹಾಕಿದ್ರು. ಅಲ್ದೇ, ಒಂದು ವೇಳೆ ಹಾಗೇ ಮಾಡಿದ್ರೆ ಮೊದಲು ದೇಶ ಬಿಟ್ಟು ಹೋಗುವುದು ಮೋದಿ, ಅಮಿತ ಶಾ ಅಂತಾ ಕುಟುಕಿದ್ರು.

ಯಾಕೂಬ ನಾಟೀಕಾರ, ಸಿಸ್ಟರ್ ಅನಿತಾ ಡಿಸೋಜಾ, ಎಸ್.ಎಂ. ಪಾಟೀಲ ಗಣಿಹಾರ, ಸೇರಿದಂತೆ ಅನೇಕ ಮುಖಂಡರು ಮಾತ್ನಾಡಿ, ಸಂವಿಧಾನ ವಿರೋಧಿ ಕಾಯ್ದೆಯನ್ನ ವಿರೋಧಿಸುತ್ತೇವೆ. ಇದನ್ನ ಜಾರಿ ಮಾಡಲು ಬಿಡುವುದಿಲ್ಲ ಅಂತಾ ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!